ಸಾವಿನ ದವಡೆಗೆ ನೂಕುವ ಕ್ರಿಮಿ.... ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು

chaitra2
Published on

ಬೆಂಗಳೂರು: ಬಿಗ್​ಬಾಸ್​ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಮತ್ತೆ ಸುದ್ದಿಯಲ್ಲಿದ್ದಾರೆ. ಸರ್​ಪ್ರೈಸ್​ ಆಗಿ ಮದುವೆಯಾಗಿ, ಮದುವೆಯಾದ ದಿನವೇ ಪೊಲೀಸ್​ ಠಾಣೆ ಮೆಟ್ಟಿಲೇರಿ ನಂತರ ಅಲ್ಲಿಂದ ಆತ್ಮಹತ್ಯೆಗೆ ಯತ್ನಿಸಿ... ಹೀಗೆ ಸಾಲು ಸಾಲಾಗಿ ಸುದ್ದಿಯಾಗಿದ್ದ ಚೈತ್ರಾ ಈಗ ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ.

ಅದು ಫೇಸ್​ಬುಕ್​ಗೆ ಪೋಸ್ಟ್​ ಮಾಡುವ ಮೂಲಕ. ಅದರಲ್ಲಿಯೂ ಸಕಾರಾತ್ಮಕವಾಗಿ ಚೈತ್ರಾ ಪೋಸ್ಟ್​ ಮಾಡಿರುವ ಕಾರಣ, ಅವರ ಅಭಿಮಾನಿಗಳಿಗೆ ಭಾರಿ ಸಂತೋಷವಾಗಿದೆ.

ಫೇಸ್​ಬುಕ್​ನಲ್ಲಿ ಹೊಸ ಪ್ರೊಫೈಲ್ ಫೋಟೋ ಹಾಕಿಕೊಂಡು ಈ ಪೋಸ್ಟ್​ ಮಾಡಿದ್ದಾರೆ ಚೈತ್ರಾ. ಅದರಲ್ಲಿ ಅವರು ‘ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ ಕ್ರಿಮಿಯು, ಬದುಕಿನ ಮಹತ್ವವನ್ನೂ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಆಭಾರಿ…’ ಎಂದು ಬರೆದಿದ್ದಾರೆ.

‘ಚೈತ್ರಾ ಅಂದ್ರೆ ಹೀಗಿರ್ಬೆಕು ಹೀಗೆ ಗಟ್ಟಿಯಾಗಿ ಖುಷಿಯನ್ನೇ ನಿರಂತರ ಹುಡುಕಿ… ಹೊಸ ಕನಸು ಮತ್ತು ಯೋಜನೆಗಳನ್ನು ಇಟ್ಟುಕೊಂಡು ಮುನ್ನೆಡೆಯಿರಿ. ನಿಮ್ಮಲ್ಲಿಯ ಅಪಾರ ಶಕ್ತಿಯ ಮೇಲೆ ನಂಬಿಕೆ ಇರಲಿ… ನೀವು ಆರೋಗ್ಯವಾಗಿರುವುದು ಕೇಳಿ ಸಂತೋಷವಾಯಿತು. ನಿಲುವು ಬೇರೆಯಾದರು ಬದುಕ ಒಲುಮೆ ಒಂದೆಯಲ್ಲವೇ.? ದೇವರ ಆಶೀರ್ವಾದವಿರಲಿ. ನೋವು ನಲಿವು ಯಾವುದು ಶಾಶ್ವತವಲ್ಲ ಅಂದುಕೊಂಡಂಗೆ ಒಂದೂ ನಡೆಯಲ್ಲ. ಆದ್ರೂ ನಗ್ ನಗ್ತಾ ಬಾಳಬೇಕು. ಒಳ್ಳೆ ಕಾಲಕ್ಕಾಗಿ ಕಾಯಬೇಕು... ’ ಎಂದು ಅನೇಕ ಮಂದಿ ಕಮೆಂಟ್​ನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net