ಲಕ್ಷ ಲಕ್ಷ ಬೆಲೆ ಬಾಳುವ ಬೈಕ್​ ಸಾವಿರಕ್ಕೆ ಮಾರಾಟ ಮಾಡ್ತಿದ್ರು!

theft
Published on

ಬೆಂಗಳೂರು: ಲಕ್ಷ ಲಕ್ಷ ರೂಪಾಯಿ ಬೆಲೆಬಾಳುವ ಬೈಕ್‌ಗಳನ್ನು ಎರಡು ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ವಸೀಂ ಪಾಷ, (25), ಅಬ್ಬಾಸ್ ಖಾನ್ (24), ಶಬ್ಬೀರ್ (22) ಮೊಹಮ್ಮದ್ ನದೀಂ (28) ಬಂಧಿತರು. ಗಾಂಜಾ ಸೇವಿಸಲು ಹಣ ಇಲ್ಲ ಎನ್ನುವ ಕಾರಣಕ್ಕೆ ಬೈಕ್​ಗಳನ್ನು ಕದ್ದು ಅವುಗಳನ್ನು ಇವರು ಮಾರಾಟ ಮಾಡುತ್ತಿದ್ದರು.

ಬಂಧಿತ ಆರೋಪಿಗಳ ಪೈಕಿ ವಸೀಂ ಗಾಂಜಾ ವ್ಯಸನಿ. ಗಾಂಜಾ ಸೇದಲಿಕ್ಕೆ ಹಣ ಇಲ್ಲದಿದ್ದಾಗ ಸಹಚರರ ಜತೆ ಬೈಕ್ ಎಗರಿಸುವ ಕೃತ್ಯಕ್ಕೆ ಇಳಿಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಎಮ್ಮೆ ಮೇಲೆ ಕುಳಿತು ಮತಯಾಚಿಸಿದ ಎಂಎಲ್​ಎ ಆಕಾಂಕ್ಷಿ ಅರೆಸ್ಟ್​

ಬಂಧಿತ ಆರೋಪಿಗಳಿಂದ ಪಲ್ಸರ್ ಆಕ್ಟೀವಾ ಡಿಯೋ ಸೇರಿ 3.5 ಲಕ್ಷ ಬೆಲೆಬಾಳುವ 10 ದ್ವಿಚಕ್ರ ವಾಹನ ವಶಕ್ಕೆ
ಕೆಪಿ ಅಗ್ರಹಾರ ಬಾಣಸವಾಡಿ ಅಮೃತಹಳ್ಳಿ ಕಮರ್ಷಿಯಲ್ ಸ್ಟ್ರೀಟ್ ಡಿಜೆಹಳ್ಳಿ ಕೆ.ಆರ್.ಪುರಂ ಸುತ್ತಮುತ್ತ ಬೈಕ್ ಎಗರಿಸುತ್ತಿದ್ದ ಆರೋಪಿಗಳು.

ಇವರಿಗಾಗಿ ಬಲೆ ಬೀಡಿದ್ದ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net