ಬೆಚ್ಚಿಬೀಳಿಸಿದ್ದ ಬಾಂಗ್ಲಾ ಯುವತಿ ಗ್ಯಾಂಗ್‌ ರೇಪ್‌: ಗುಪ್ತಾಂಗಕ್ಕೆ ಬಾಟ್ಲಿ ತುರುಕಿ ವಿಕೃತಿ ಮೆರೆದಿದ್ದವ ಇವನೇ...

banglacase
Published on

ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಈಚೆಗೆ ನಡೆದಿದ್ದ ಗ್ಯಾಂಗ್‌ ರೇಪ್‌ ಕೇಸೊಂದು ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವೈಯಕ್ತಿಯ ದ್ವೇಷದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿತ್ತು. ನಂತರ ವಿಕೃತಿ ಮೆರೆದಿದ್ದ ಯುವಕರು ಆಕೆಯ ಗುಪ್ತಾಂಗಕ್ಕೆ ಬಾಟಲಿ ಪೀಸ್‌ ತುರುಕಿದ್ದರು. ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ಕೆಲವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಶೂಬೂಜ್ (30) ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಂದಿ ಆಯುವರ ಶೆಡ್‌ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸ್ ಜೀಪ್‌ನಲ್ಲಿ ಕೂರಿಸಿಕೊಂಡಾಗ ಅರ್ಜೆಂಟಾಗಿ ಮೂತ್ರಕ್ಕೆ ಹೋಗಬೇಕು ಎಂದಿದ್ದಾನೆ. ಇಲ್ಲದಿದ್ದರೆ ಕಾರಿನಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.

ಬಾಂಗ್ಲಾ ಯುವತಿಯ ಮೇಲೆ ಹಲ್ಲೆ, ಅತ್ಯಾಚಾರ ಪ್ರಕರಣ: ಪೊಲೀಸ್​ ವಿಚಾರಣೆಯಲ್ಲಿ ಸ್ಫೋಟಕ  ಮಾಹಿತಿ ಬಯಲು | VIJAYAVANI - ವಿಜಯವಾಣಿ

ಅದಕ್ಕಾಗಿ‍ ಪೊಲೀಸರು ಕೆಳಕ್ಕೆ ಬಿಟ್ಟಾಗ, ತನ್ನ ಬಳಿಯೇ ಇಟ್ಟುಕೊಂಡಿದ್ದ ಚಾಕುವಿನಿಂದ ಶೂಬುಜ್ ಹೆಡ್ ಕಾನ್ಸ್ ಟೇಬಲ್ ದೇವೇಂದರ್ ನಾಯಕ್ ಮತ್ತು ಸಬ್ ಇನ್ಸ್‌ಪೆಕ್ಟರ್ ಶಿವರಾಜ್ ಅವರಿಗೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮುಂಜಾನೆ ಸುಮಾರು 6.40ರ ವೇಳೆ ರಾಂಪುರ ಕೆರೆ ಬಳಿ ಈ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಇದು ಆತನ ಎಡಗಾಲಿಗೆ ಬಿದ್ದಿದ್ದು, ಆತನನ್ನು ಬಂಧಿಸಿದ್ದಾರೆ. ದೇವೇಂದರ್ ನಾಯಕ್ ಬಲಗೈಗೆ ಮತ್ತು ಶಿವರಾಜ್ ಎಡಗೈಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನಧಿಕೃತವಾಗಿ ಬೆಂಗಳೂರಿಗೆ ಬಂದಿದ್ದವರು ಈ ಎಲ್ಲರೂ. ಣಕಾಸಿನ ವಿಚಾರಕ್ಕಾಗಿಯೇ ದೌರ್ಜನ್ಯ ಮಾಡಲಾಗಿದೆ ಎಂದು 28 ವರ್ಷದ ಸಂತ್ರಸ್ತ ಯುವತಿ ದೂರು ನೀಡಿದ್ದಳು. ಘಟನೆ ನಡೆದ ಸಂದರ್ಭದಲ್ಲಿ ಯುವತಿ ಸಹ ಇದ್ದು, ಆಕೆಗಾಗಿ ಜಾಲ ಬೀಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net