ಅಬುಧಾಬಿಯಲ್ಲಿ ನಟಿ ರಶ್ಮಿಕಾ: ಅಕ್ಟೋಬರ್​ನಲ್ಲಿ 'ಗುಡ್​ಬೈ'- ಮಾಹಿತಿ ಹಂಚಿಕೊಂಡ ಕೊಡಗಿನ ಬೆಡಗಿ

rashmika
Published on

ಬೆಂಗಳೂರು: ಕೊಡಗಿನ ಬೆಡಗಿ, ಸ್ಯಾಂಡಲ್​ವುಂಡ್​ ಸುಂದರಿ, ನ್ಯಾಷನಲ್ ಕ್ರಶ್ ಎಂದೆಲ್ಲಾ ಬಿರುದು ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಮೊದಲನೆಯದಾಗಿ ಇವರು ಅಬುಧಾಬಿಯಲ್ಲಿ ಎಂಜಾಯ್ ಮೂಡ್​ನಲ್ಲಿದ್ದು, ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಅಬುಧಾಬಿಯ ಕೆಲವು ಫೋಟೋಗಳನ್ನು ಅವರು ಶೇರ್​ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನನಗೆ ಟ್ರಾವೆಲ್​ ಮಾಡುವುದು ಎಂದರೆ ಇಷ್ಟ. ಅದರಲ್ಲೂ ಶೂಟಿಂಗ್​ಗಾಗಿ ಟ್ರಾವೆಲ್​ ಎಂದರೆ ಇನ್ನೂ ಇಷ್ಟ ಎಂದು ಬರೆದಿದ್ದಾರೆ.

ಕನ್ನಡ ಮಾತ್ರವಲ್ಲದೇ, ಈಗ ತೆಲುಗು ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಈಕೆ ಮೆರೆಯುತ್ತಿದ್ದಾರೆ. ಸದ್ಯ ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಇರೋ ಈ ನಟಿ ಈಗ ಮತ್ತೊಂದು ವಿಷಯವನ್ನು ಹಂಚಿಕೊಂಡಿದ್ದಾರೆ.

ಅದೇನೆಂದರೆ ಅಕ್ಟೋಬರ್​ನಲ್ಲಿ ಗುಡ್​ಬೈ ಎಂದಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಒಮ್ಮೆಲೇ ಶಾಕ್​ ಆಗಿದ್ದಾರೆ. ಚಿತ್ರರಂಗದಿಂದ ಗುಡ್​ಬೈನೋ ಏನೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅಸಲಿಗೆ ರಶ್ಮಿಕಾ ಹೇಳಹೊರಟಿರುವುದು ಅವರ ಮುಂದಿನ ಹಿಂದಿ ಚಲನಚಿತ್ರ ಗುಡ್​ಬೈ ಕುರಿತು. ಬಿಟೌನ್‌ನ ಲೆಜೆಂಡ್ ಅಮಿತಾಭ್​ ಬಚ್ಚನ್​ ಜತೆ ರಶ್ಮಿಕಾ ನಟಿಸಿರುವ ಗುಡ್ ಬೈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ತಮ್ಮ ಬಾಲಿವುಡ್ ಮೊದಲ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿ, ರಿಲೀಸ್ ಡೇಟ್ ಕುರಿತು ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 7ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಕುರಿತು ರಶ್ಮಿಕಾ ಅಪ್​ಡೇಟ್​ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net