More

    ಉನ್ನತ ಹುದ್ದೆ ಆಸೆ ತೋರಿಸಿ ಕೋಟಿ ಕೋಟಿ ಹಣ ಗುಳುಂ: ಸ್ಯಾಂಡಲ್​ವುಡ್​ ನಟ ಅರೆಸ್ಟ್​- ಕೇಸ್​ಗಳು ಒಂದಲ್ಲಾ… ಎರಡಲ್ಲಾ…

    ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದ ಸ್ಥಾನಕ್ಕೆ ಟಿಕೆಟ್​ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಹೊತ್ತ ಸ್ಯಾಂಡಲ್​ವುಡ್​ ನಟ, ನಿರ್ಮಾಪಕ ವೀರೇಂದ್ರ ಬಾಬು ಅವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

    ರಾಷ್ಟ್ರ ಜನಹಿತ ಪಕ್ಷ ಎಂಬ ಹೆಸರಿನ ಪಕ್ಷವೊಂದನ್ನು ಕಟ್ಟಿಕೊಂಡಿರುವ ವೀರೇಂದ್ರ ಬಾಬು ಅವರು ಎಂಎಲ್​ಎ, ಎಂಪಿ ಸೀಟಿಗೆ ಟಿಕೆಟ್​ ಕೊಡಿಸುವುದಾಗಿ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ. ವೀರೇಂದ್ರ ಅವರ ವಿರುದ್ಧ ಬಸವರಾಜ್​ ಘೋಷಾಲ್​ ಎನ್ನುವವರು ದೂರು ನೀಡಿದ್ದಾರೆ. ಸದ್ಯ ಇವರ ವಿರುದ್ಧ 1.88 ಕೋಟಿ ರೂಪಾಯಿ ವಂಚನೆ ಆರೋಪವಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಮೂರು ವರ್ಷಗಳ ಹಿಂದೆ ‘ಸ್ವಯಂ ಕೃಷಿ’ ಹೆಸರಲ್ಲಿ ಹತ್ತಾರು ಕಂಪೆನಿಗಳನ್ನು ಹುಟ್ಟುಹಾಕಿ, ಅನೇಕ ಜನರಿಗೆ ವಂಚನೆಯನ್ನು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆಗ ಹೈದರಾಬಾದ್​ನಲ್ಲಿ ಪೊಲೀಸರು ವೀರೇಂದ್ರ ಬಾಬು ಅವರನ್ನು ಬಂಧಿಸಿದ್ದರು. ಇದೀಗ ಮತ್ತೆ ಅವರ ಮೇಲೆ ಕೋಟ್ಯಂತರ ರೂ. ಹಣ ವಂಚನೆ ಆರೋಪ ಕೇಳಿಬಂದಿದೆ.

    ರಾಷ್ಟ್ರ ಜನಹಿತ ಪಕ್ಷ ಮಾತ್ರವಲ್ಲದೇ, ಕರ್ನಾಟಕ ರಕ್ಷಣಾ ಪಡೆ ಎಂಬ ಹೆಸರಿನ ಸಂಘಟನೆ ಕಟ್ಟಿ ಮೋಸ ಮಾಡಿರುವುದು ತಿಳಿದುಬಂದಿದೆ. ಈ ಸಂಘಟನೆಗೆ ತಾಲೂಕು ಹಾಗೂ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡುವುದಾಗಿ ಹಲವಾರು ಜನರಿಂದ ಹಣ ಪಡೆದು ವಂಚನೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಹಣವನ್ನು ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವುದಾಗಿ ಹೇಳಿಕೊಂಡಿದ್ದರು. ಆದರೆ ನಂತರ ಇವೆಲ್ಲಾ ಮೋಸದಾಟ ಎಂದು ತಿಳಿದುಬಂದಿದೆ.

    ಅಂದಹಾಗೆ, ವೀರೇಂದ್ರ ಬಾಬು ಅವರು, 2011ರಲ್ಲಿ ಸ್ವಯಂ ಕೃಷಿ ಚಿತ್ರವನ್ನು ನಿರ್ಮಿಸಿ ನಟಿಸಿದ್ದಾರೆ. ಈ ವೀರೇಂದ್ರ ಬಾಬು ಜತೆ ತಮನ್ನಾ ಪಾಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಂಬರೀಷ್​, ಸುಮನ್ ಜಿಕೆ, ಚರಣ್ ರಾಜ್, ರೇಖಾ ವಿ.ಕುಮಾರ್, ಸತ್ಯಜಿತ್, ಉಮಾಶ್ರೀ, ರಂಘಾಯಣ ರಘು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

    VIDEO: ‘ನೀನು ಸಿನಿಮಾಕ್ಕೆ ಸೆಲೆಕ್ಟ್​ ಆಗ್ಲಿಲ್ಲ, ಆದ್ರೆ ನನ್​ ಹೆಂಡ್ತಿ ಥರ ಇದ್ರೆ ತಿಂಗಳಿಗೆ 25 ಲಕ್ಷ ಕೊಡುವೆ ಅಂದಿದ್ದ ಉದ್ಯಮಿ!’

    ಮಾಡೆಲ್​ನಂತಾಗಲು 4.5 ಕೋಟಿ ರೂ. ಖರ್ಚು ಮಾಡಿದಳು- ಮೊದಲಿನಂತಾಗಲು ಮತ್ತೆ ಸರ್ಜರಿ ಮಾಡಿಸಿದಳು!

    ಡೊನಾಲ್ಡ್​ ಟ್ರಂಪ್​ ಮೊದಲ ಪತ್ನಿ, ಸುಪ್ರಸಿದ್ಧ ಮಾಡೆಲ್ ಇವಾನಾ ನಿಗೂಢ ಸಾವು: ಪೊಲೀಸರಿಂದ ತನಿಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts