

ಬೆಂಗಳೂರು: ಕೈಯಲ್ಲಿ ಬುಟ್ಟಿ ಇಟ್ಟುಕೊಂಡು, ತೋಟದಲ್ಲಿ ಹಣ್ಣುಗಳನ್ನು ಕೀಳುತ್ತಾ, ಗಿಡಗಳನ್ನು ನೆಡುತ್ತಾ, ಕಳೆಗಳನ್ನು ಕೀಳುತ್ತಾ ಇದ್ದಾರೆ ’ಕರ್ನಾಟಕದ ಕ್ರಷ್’ ಎಂದೇ ಅಭಿಮಾನಿಗಳ ಮನಗೆದ್ದಿರುವ ಸ್ಯಾಂಡಲ್‌ವುಡ್ ತಾರೆ ಆಶಿಕಾ ರಂಗನಾಥ್.
ಸದ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾವುದೇ ಚಿತ್ರೀಕರಣ ಇಲ್ಲದ ಕಾರಣ, ತೋಟದಲ್ಲಿ ಫುಲ್ ಬಿಜಿಯಾಗಿರುವ ಈ ನಟಿ, ತುಮಕೂರು ಮೂಲದವರು. ತಾವು ಕೆಲಸ ಮಾಡುತ್ತಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಫಾರ್ಮ್‍ಹೌಸ್‍ನಲ್ಲಿ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜತೆ ಕೆಲಸ ಮಾಡುತ್ತಾ ಖುಷಿಖುಷಿಯಾಗಿರುವ ಇವರ ಫೋಟೋ ನೋಡಿ ಅಭಿಮಾನಿಗಳು ಸಂತಸದಿಂದ ಕುಣಿದಾಡುತ್ತಿದ್ದಾರೆ.
ಮಾವಿನಹಣ್ಣು, ತರಕಾರಿಗಳನ್ನು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇವರು 2016ರಲ್ಲಿ ಕ್ರೇಜಿ ಬಾಯ್ ಮೂಲಕ ಖ್ಯಾತಿ ಗಳಿಸಿರುವ ಆಶಿಕಾ, ಮಹೇಶ್ ಬಾಬು ನಿರ್ದೇಶಿಸಿದ ಚಿತ್ರದಲ್ಲಿ ದಿಲೀಪ್ ಪ್ರಕಾಶ್ ಎದುರು ಅಭಿನಯಿಸಿದ್ದಾರೆ. ಸದ್ಯ ರೇಮೊ ಹಾಗೂ ಮದಗಜ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.