

ಬೆಂಗಳೂರು: ರುದ್ರಭೂಮಿಯಲ್ಲಿ ಕಾರ್ಯ ನಿರ್ವಹಿಸುವ ಮುನ್ನೂರು ಕಾರ್ಮಿಕರಿಗೆ ಹನ್ನೆರಡು ತಿಂಗಳಿನಿಂದ ಸಂಬಳ ನೀಡಿಲ್ಲದ ವಿಷಯ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಇಕ್ಕಟ್ಟು ಸೃಷ್ಟಿಸಿತು.
ವಿಧಾನಸೌಧ ಮುಂಭಾಗ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರುದ್ರಭೂಮಿ ಕಾರ್ಮಿಕರು ಏಕಾಏಕಿ ಸಿಎಂ ಕಾರಿನ ಬಳಿ ಬಂದು ನಿಂತರು. ನಮಗೆ ಉತ್ತರ ನೀಡುವಂತೆ ಆಗ್ರಹಿಸಿದರು. ಬಳಿಕ ಭದ್ರತಾ ಸಿಬ್ಬಂದಿ ಸಿಎಂ ತೆರಳಲು ಅವಕಾಶ ನೀಡಿದರು. ಇದನ್ನೂ ಓದಿರಿ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!
ಈ ವೇಳೆ ಸ್ಥಳದಲ್ಲಿದ್ದ ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಅವರು ರಸ್ತೆಯಲ್ಲೇ ನಿಂತು ಕಾರ್ಮಿಕರ ಬಿಸಿಬಿಸಿ ಮಾತು ಆಲಿಸುವುದು ಅನಿವಾರ್ಯವಾಯಿತು. ನಂತರ ಸಮಸ್ಯೆ ಆಲಿಸಿ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಿದರು.
ತಕ್ಷಣವೇ ಮಾಹಿತಿ ಪಡೆದು ವೇತನ ಬಿಡುಗಡೆ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಭರವಸೆ ನೀಡಿದರು.