ಪಡುವರಿ ಸೋಮೇಶ್ವರ ದೇಗುಲದಲ್ಲಿ ರುದ್ರಹೋಮ

shi
Published on

ಬೈಂದೂರು: ಐತಿಹಾಸಿಕ ಪ್ರಸಿದ್ಧ ಪಡುವರಿ ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಬುಧವಾರ ವೈಭವದ ಮಹಾಶಿವರಾತ್ರಿ ಮಹೋತ್ಸವ ನಡೆಯಿತು. ಬೆಳಗ್ಗೆ ದೇವರ ಸನ್ನಿಧಿಯಲ್ಲಿ ರುದ್ರಾಭಿಷೇಕ, ರುದ್ರಹೋಮ, ಬಿಲ್ವರ್ಚನೆ, ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಸಂಜೆ ತಾಲೂಕು ಮಟ್ಟದ ಭಜನಾ ಕುಣಿತ ಸ್ಪರ್ಧೆ ಹಾಗೂ ರಾತ್ರಿ ದೇವರ ನಗರೋತ್ಸವ ನಡೆಯಿತು.

ಶ್ರೀ ಸೇನೇಶ್ವರ ದೇವಸ್ಥಾನ

ಬೈಂದೂರು ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಬುಧವಾರ ನಡೆಯಿತು. ಬೆಳಗ್ಗೆ ಸಾಮೂಹಿಕ ನವಗ್ರಹಯುಕ್ತ ರುದ್ರಹೋಮ, ಸಂಜೆ ಶತರುದ್ರ, ಮಹಾಮಂಗಳಾರತಿ, ಪನಿವಾರ ವಿತರಣೆ, ರಾತ್ರಿ ಮಹಾಮಂಗಳಾರತಿ ನಗರೋತ್ಸವ ನಡೆಯಿತು. ಶಿರೂರು ಮೇಲ್ಪಂಕ್ತಿ ಶ್ರೀ ಎರಗೇಶ್ವರ, ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ, ಹೇರಂಜಾಲು ಗುಡೇ ಶ್ರೀ ಮಹಾಲಿಂಗೇಶ್ವರ, ಮಡಿಕಲ್ ಅರಮಕೊಡಿ ಶ್ರೀ ಮಹಾಈಶ್ವರ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ಉತ್ಸವ ನಡೆಯಿತು. ಪರಿಸರದ ಎಲ್ಲ ಶಿವನ ದೇವಸ್ಥಾನಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಜಾಗರಣೆ ಪ್ರಯುಕ್ತ ಎಲ್ಲ ದೇವಳಗಳಲ್ಲಿ ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ಭಜನಾ ಸಂಕೀರ್ತನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net