ಆರ್‌ಎಸ್‌ಎಸ್ ಮುಖಂಡ ರಾಜೀವ ದೇವಾಡಿಗ

rajeev devadiga
ರಾಜೀವ ದೇವಾಡಿಗ
Published on

ಕೋಟ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ, ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದ ಧುರೀಣ ಜಿ.ರಾಜೀವ ದೇವಾಡಿಗ (81) ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿ, ಕೋಟ ಹಿಂದು ಜಾಗರಣ ವೇದಿಕೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಹಿರೇಮಹಾಲಿಂಗೇಶ್ವರ ಮಿತ್ರವೃಂದ ಹೀಗೆ ಹಲವು ಸಂಘಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಕೋಟ ಸಹಕಾರಿ ವ್ಯವಸಾಯಕ ಸಂಘದ ಸಿಬ್ಬಂದಿಯಾಗಿ, ಪ್ರಬಂಧಕರಾಗಿ ಅದೇ ಸಂಘದಲ್ಲಿ ಪ್ರಸ್ತುತ ಉಪಾಧ್ಯಕ್ಷರಾಗಿದ್ದರು. ಕೋಟ ಶ್ರೀ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ, ಕೋಟ ಹಾಲು ಉತ್ಪಾದಕರ ಸಂಘದ ನಿರ್ದೇಶಕ, ಕೋಟ ಸೇವಾ ಸಂಗಮ ಶಿಶುಮಂದಿರದ ಸ್ಥಾನೀಯ ಸಮಿತಿ ಸದಸ್ಯರಾಗಿ, ಕೋಟ ಅಮೃತೇಶ್ವರ ಹಲವು ಮಕ್ಕಳ ತಾಯಿ ದೇಗುಲದ ಟ್ರಸ್ಟಿಯಾಗಿ, ದೇಗುಲದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಯಾಗಿ ತೊಡಗಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net