ಕುಂದಾಪುರ: ಉದ್ಯಮ ಆರಂಭಿಸಿದಾಗ ಯಶಸ್ಸು ಸಿಕ್ಕಿದರೆ ಹೊಗಳುತ್ತಾರೆ. ನಷ್ಟ ಅನುಭವಿಸಿದರೆ ತೆಗಳುತ್ತಾರೆ. ಅದನ್ನೆಲ್ಲ ಗಂಭೀರವಾಗಿ ಪರಿಗಣಿಸಲೇಬಾರದು. ಯಾವುದೇ ಉದ್ಯಮ ಆರಂಭಿಸುವ ಮುನ್ನ ನಿಮ್ಮ ಯೋಚನೆ ಹಾಗೂ ನಿಮ್ಮಲ್ಲಿ ಅದರ ಬಗ್ಗೆ ಇರುವ ಆತ್ಮವಿಶ್ವಾಸ ಬಹಳ ಮುಖ್ಯ ಎಂದು ಅರೇಕಾ ಟೀ ಸಂಸ್ಥಾಪಕ, ಸಿಇಒ ನಿವೇದನ್ ನೆಂಪೆ ಹೇಳಿದರು.
ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ವ್ಯವಹಾರ ದಿನ ಉದ್ಘಾಟಿಸಿ ಮಾತನಾಡಿದರು.
ಶ್ರೀ ವೆಂಕಟರಮಣ ದೇವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೆ. ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಬೆಂಕಿಮಣಿ ಸಂತು (ಅಶಕ್ತರಿಗೆ ನೆರವು), ರಾಘವೇಂದ್ರ ನೆಂಪು(ರಕ್ತದಾನ), ಮಂಜುನಾಥ ನಾಯ್ಕ ಕನ್ನೇರಿ (ಮುಳುಗು ತಜ್ಞರು), ಶಂಕರ ಪೂಜಾರಿ ಅಂಪಾರು(ಉರಗ ರಕ್ಷಕರು), ಗಣೇಶ ಕಂಬದಕೋಣೆ (ಸ್ವಚ್ಛತಾ ಸೇವೆ) ಅವರನ್ನು ಸನ್ಮಾನಿಸಲಾಯಿತು. ಉದ್ಯಮಿಗಳಾದ ಬಿ.ಎಸ್. ಸುರೇಶ್ ಶೆಟ್ಟಿ ಉಪ್ಪುಂದ, ದಿನೇಶ್ ಹೆಗ್ಡೆ ಮೊಳಹಳ್ಳಿ, ಟ್ರಸ್ಟ್ ಕಾರ‌್ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಖಜಾಂಚಿ ಕೆ. ಲಕ್ಷ್ಮೀನಾರಾಯಣ ಶೆಣೈ, ಸದಸ್ಯ ರತ್ನಾಕರ ಶೆಣೈ, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣ ಅಡಿಗ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೇಷ್ಮಾ ಡಿಸೋಜ, ಕಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಪ್ರಮೀಳಾ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು. ವೆಂಕಟರಮಣ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂದೀಪ್ ಗಾಣಿಗ ಸ್ವಾಗತಿಸಿದರು. ಕಾರ‌್ಯಕ್ರಮ ಸಂಯೋಜಕ ಶಿವರಾಜ್ ಸಿ. ಪ್ರಸ್ತಾವಿಸಿದರು. ಉಪನ್ಯಾಸಕರಾದ ಅಮೃತಾ ಮತ್ತು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸುಶಾಂತ್ ನಾಯ್ಕ ವಂದಿಸಿದರು.