

ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸಮುದಾಯ ದಳ ಮುಡುಗಿಳಿಯಾರು ಮತ್ತು ಬಸವೇಶ್ವರ ಸಮಿತಿ ಆಶ್ರಯದಲ್ಲಿ ಮೂಡುಗಿಳಿಯಾರಿನ ದೊಡ್ಡ ಬಸವೇಶ್ವರ ದೇಗುಲದಲ್ಲಿ ದೀಪೋತ್ಸವ ನಡೆಯಿತು. ಬಸವೇಶ್ವರ ಕ್ಷೇತ್ರ ಅಭಿವದ್ಧಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ಕೋಟ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭಾರತ್ ಕುಮಾರ್ ಶೆಟ್ಟಿ, ಅತಿಥಿಯಾಗಿ ರೋಟರಿ ಕ್ಲಬ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಕ್ಲಬ್ ಪ್ರೊ.ಬಾಲಕೃಷ್ಣ ಶೆಟ್ಟಿ, ಗೋಪಾಲ ಹಿರೇಮಠ್, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಟಿ.ಮಂಜುನಾಥ, ಸಂಘ ಮುಖ್ಯ ಕಾರ್ಯನಿರ್ವಣಾಧಿಕಾರಿ ಶರತ್‌ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.