ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯನ್ನು ಕ್ಷಯಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ 100 ದಿನಗಳ ಕ್ಷಯರೋಗ ನಿಯಂತ್ರಣ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿನಂತಿಸಿದರು.

ಉಡುಪಿಯ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕ್ಷಯರೋಗ ನಿಯಂತ್ರಣದ 100 ದಿನಗಳ ಅಭಿಯಾನ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಪ್ರದಾನ ಸವಾರಂಭ ಉದ್ಘಾಟಿಸಿ ವಾತನಾಡಿದರು.
26 ಗ್ರಾಪಂ ಆಯ್ಕೆ: ಜಾಗತಿಕ ಮಟ್ಟದಲ್ಲಿ ಹೊರೆಯಾಗುತ್ತಿರುವ ಹಾಗೂ ಜನರನ್ನು ಭಯಭೀತರನ್ನಾಗಿಸುವಲ್ಲಿ ಕ್ಷಯರೋಗವೂ ಒಂದು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರದಿಂದ ರೋಗ ಹತೋಟಿಯ ಪ್ರಯತ್ನ ನಡೆಯುತ್ತಲೇ ಇದೆ. ಹೀಗಾಗಿ ಜನಜಾಗೃತಿಗಾಗಿ 100 ದಿನಗಳ ಅಭಿಯಾನ ನಡೆಯಲಿದೆ. ಗ್ರಾಮದ ಜನರ ಆರೋಗ್ಯ ತಪಾಸಣೆ, ಗುಣಮುಖವಾಗಿರುವ ಅಂಕಿ-ಅಂಶ ಇತ್ಯಾದಿಗಳ ಆಧಾರದಲ್ಲಿ ಜಿಲ್ಲೆಯ 26 ಗ್ರಾಪಂಗಳನ್ನು ಕ್ಷಯ ಮುಕ್ತವೆಂದು ಆಯ್ಕೆ ವಾಡಲಾಗಿದೆ ಎಂದರು.
ವಾರ್ಚ್ 24 ಗಡುವು: ವಿಶ್ವ ಆರೋಗ್ಯ ಸಂಸ್ಥೆಯ ಮಂಗಳೂರು ವಿಭಾಗದ ಸಲಹೆಗಾರ ಡಾ.ಜೋಸ್ ಥೋಮಸ್ ಪ್ರಾಸ್ತಾವಿಕವಾಗಿ ವಾತನಾಡಿ, 2025ರ ವಾರ್ಚ್ 24ರ ಒಳಗಾಗಿ ರಾಜ್ಯದಲ್ಲಿ ಟಿಬಿ ರೋಗಿಗಳನ್ನು ಕಡಿಮೆ ವಾಡುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿರುವ ಕ್ಷಯರೋಗಿಗಳನ್ನು ಗುರುತಿಸಿ, ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುವಾರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಿದಾನಂದ ಸಂಜು, ಕ್ಷಯ ಮುಕ್ತ ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಮಂಜುನಾಥ್ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಪಂಚಾಯಿತಿಗೆ ಪ್ರಶಸ್ತಿ ಪ್ರದಾನ
ಕ್ಷಯ ಮುಕ್ತ ಗ್ರಾಪಂ ಎಂದು ಆಯ್ಕೆ ವಾಡಲಾದ ಪಾಂಡೇಶ್ವರ, ಉಪ್ಪೂರು, ಹಾವಂಜೆ, ಚೇರ್ಕಾಡಿ, ನೀಲಾವರ, ಆರೂರು, ಕರ್ಜೆ, 38ನೇ ಕಳ್ತೂರು, ಗಂಗೊಳ್ಳಿ, ಇಡೂರು ಕುಜ್ಞಾಡಿ, ಯಡಮೊಗೆ, ಹೆಬ್ರಿ, ಮುದ್ರಾಡಿ, ದುರ್ಗಾ, ಈದು, ರೆಂಜಾಳ, ಮಜೂರು, ಕೋಟೆ, ಕುತ್ಯಾರು, ಬಡಾ, ಪಲಿವಾರು, ನಾಡಾ, ಹಳ್ಳಿಹೊಳೆ, ಬೈರಂಪಳ್ಳಿ, ಬೆಳ್ಳೆ ಹಾಗೂ ಮಣಿಪುರ ಪಂಚಾಯಿತಿಗೆ ಪ್ರಶಸ್ತಿ ಪ್ರದಅನ ಮಾಡಲಾಯಿತು.
ಕ್ಷಯರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಂಬಂಧಿತ ಇತರ ಇಲಾಖೆಗಳೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಪಂ ಮಟ್ಟದಲ್ಲಿಯೂ ಸವಾರೋಪಾದಿಯಲ್ಲಿ ಕೆಲಸ ವಾಡಬೇಕು. ಕ್ಷಯರೋಗಿಗಳಲ್ಲಿ ಆತವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು.
ಕೋಟ ಶ್ರೀನಿವಾಸ ಪೂಜಾರಿ, ಸಂಸದ.