ಆರ್​ ಆರ್​ ನಗರದಲ್ಲಿ ಜೆಡಿಎಸ್​ ಗೆಲ್ಲೋದಿಲ್ಲ ಎಂದ ಎಚ್​ಡಿಕೆ!

HDK
Published on

ಬೆಂಗಳೂರು: ಉಪ ಸಮರದ ಹೈವೋಲ್ಟೇಜ್​ ಕ್ಷೇತ್ರ ಎನಿಸಿದ ಆರ್​.ಆರ್​. ನಗರ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಸಿಎಂ ಎಚ್.​ಡಿ.ಕುಮಾರಸ್ವಾಮಿ ಸುಳಿವು ನೀಡಿದ್ದಾರೆ.

ಆರ್ ಆರ್ ನಗರ ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಹಣದ ಹೊಳೆಯನ್ನೇ ಹರಿಸಿದವು. ಬಿಜೆಪಿ, ಕಾಂಗ್ರೆಸ್​ ಹಣದ ಮುಖಾಂತರ ಚುನಾವಣೆ ನಡೆಸಿವೆ, ನಮ್ಮಲ್ಲಿ ಶಕ್ತಿ ಇರಲಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್​ ಎರಡು ಅಥವಾ ಮೂರನೇ ಸ್ಥಾನಕ್ಕೆ ಬರಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಆರ್​.ಆರ್​. ನಗರ ಮತ್ತು ಶಿರಾ ಮತದಾನದ ನಂತರ ಕಾಂಗ್ರೆಸ್​ ಮತ್ತು ಬಿಜೆಪಿಯವರು ತಾವು ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದೇವೆ ಎನ್ನುತ್ತಿವೆ. ಹಣದ ಮುಖಾಂತರ ಚುನಾವಣೆ ನಡೆಸಿರುವ ಮುನ್ಸೂಚನೆ ಇದು. ಕೆ.ಆರ್​ . ಪೇಟೆಯ ಚುನಾವಣೆಯಲ್ಲಿ ಬಿಜೆಪಿಯವರು ಸಕ್ಸಸ್​ ಆಗಿದ್ದಾರೆ. ಅದೇ ತಂತ್ರವನ್ನು ಆರ್​.ಆರ್​. ನಗರದಲ್ಲೂ ಅನುಸರಿಸಿದ್ದಾರೆ. ಆದರೆ, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ಎಚ್​ಡಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ಪಕ್ಷದವರು ವಿನಯ್​ ಕುಲಕರ್ಣಿ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಅಧಿಕಾರಿಗಳು ನ್ಯಾಯಯುತ ತನಿಖೆ ನಡೆಸಿ, ಯೋಗೀಶ್​ ಗೌಡರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net