

ತುಮಕೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ಗೆ ತವರು ಕ್ಷೇತ್ರ ಕೊರಟಗೆರೆಯಲ್ಲಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
15 ಸದ್ಯಸರ ಬಲಾಬಲ ಹೊಂದಿರುವ ಕೊರಟಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆ ನಡೆಯಿತು.
ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ನ 8, ಕಾಂಗ್ರೆಸ್ 5, ಬಿಜೆಪಿ 1, ಪಕ್ಷೇತರ 1 ಸದಸ್ಯರಿದ್ದಾರೆ. ಪಕ್ಷೇತರ ಮತ್ತು ಬಿಜೆಪಿ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಜೈ ಎಂದರು. ಪರಿಣಾಮ ಪಟ್ಟಣಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್ನ ಮಂಜುಳಾ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷೆ ಸ್ಥಾನವೂ ಜೆಡಿಎಸ್ ಪಾಲಾಯ್ತು. ಜೆಡಿಎಸ್ ಸದಸ್ಯೆ ಭಾರತಿ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದರು.
ಪಪಂ ಅಧ್ಯಕ್ಷ ಗಾದಿಯನ್ನು ಕೈ ವಶಕ್ಕೆ ಪಡೆಯಲು ಡಾ.ಜಿ. ಪರಮೇಶ್ವರ್ ತೀವ್ರ ಕಸರತ್ತು ನಡೆಸಿದ್ದರಾದರೂ ಸಿಕ್ಕಿದ್ದು ಮಾತ್ರ ಜೆಡಿಎಸ್ನ ಓರ್ವ ಸದಸ್ಯೆಯ ಬೆಂಬಲ.