ಮತದಾನ ಮುಗಿಯುತ್ತಿದ್ದಂತೆ ಶಾಸಕ, ಸಚಿವರ ಫೋನ್​ ಸಿಚ್ಡ್​ ಆಫ್​! ಅಂತಹದ್ದೇನಾಯ್ತು?

Mobile Use
Published on

ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆ ಹೊಣೆಗಾರಿಕೆ ಹೊತ್ತಿದ್ದ ಸಚಿವರು ಮತ್ತು ಶಾಸಕರು, ಎಲ್ಲ ಪಕ್ಷಗಳ ಮುಖಂಡರೀಗ ರಿಲ್ಯಾಕ್ಸ್​ ಮೂಡ್​ಗೆ ತೆರಳಿದ್ದಾರೆ.

ಚುನವಾಣೆ ಮತದಾನ ಪ್ರಕ್ರಿಯೆ ಮುಗಿಯುವ ತನಕವೂ, ಸತತ ಸಂಪರ್ಕದಲ್ಲಿದ್ದು ಮಾಹಿತಿ ಪಡೆದು, ಫೋನ್​ ಮೂಲಕವೇ ನಿರ್ದೇಶನ ನೀಡುತ್ತಿದ್ದ ಸಚಿವರು, ಶಾಸಕರು ಮತ್ತು ಮುಖಂಡರ ಫೋನ್​ಗಳೀಗ ನಾಟ್​ ರೀಚಬಲ್​ ಆಗಿವೆ. ಇನ್ನು ಕೆಲವರ ಫೋನ್​ಗಳು ಸ್ವಿಚ್ಡ್​ ಆಫ್​ ಆಗಿವೆ. ಒಂದೆರಡು ದಿನ ರಿಲ್ಯಾಕ್ಸ್​ ಮಾಡಿಕೊಳ್ಳುವ ಸಲುವಾಗಿ ಕೆಲವರು ಫೋನ್​ ಸಂಪರ್ಕದಿಂದ ದೂರ ಉಳಿದರೆ, ಇನ್ನು ಕೆಲವರು ಚುನಾವಣೆ ಖರ್ಚು- ವೆಚ್ಚ ಎಂದು ಹಣಕ್ಕಾಗಿ ಕಾಟ ಕೊಡುತ್ತಾರೆ. ಆದ್ದರಿಂದ ಸ್ವಲ್ಪ ದಿನ​ ಸಂಪರ್ಕಕ್ಕೆ ಸಿಗದಿರಲು ನಿರ್ಧರಿಸಿದ್ದಾರೆ.

ಮತದಾನ ದಿನದ ತನಕ ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಕ್ರಿಯವಾಗಿ ನಿಭಾಯಿಸುವ ಮೂಲಕ ಪಕ್ಷದ ಅಭ್ಯರ್ಥಿಗಳಿಗೆ ಗೆಲುವು ತಂದುಕೊಡಬೇಕು ಎಂದು ಪಕ್ಷ ನೀಡಿದ್ದ ಕಟ್ಟುನಿಟ್ಟಿನ ಸೂಚನೆಯನ್ನು ಪರಿಪಾಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಬಿಜೆಪಿ ಶ್ಲಾಘಿಸಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದ ಬೆನ್ನಲ್ಲಿಯೇ ಚುನಾವಣೆ ಅಖಾಡಕ್ಕಿಳಿದಿದ್ದ ಬಿಜೆಪಿ ಹೋಬಳಿ ಮಟ್ಟಕ್ಕೂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಕರಾರುವಕ್ಕಾಗಿ ಚುನಾವಣೆ ಎದುರಿಸಿತ್ತು. ತಾನು ಹಾಕಿರುವ ಶ್ರಮ ಮತ್ತು ವ್ಯವಸ್ಥಿತ ಪ್ರಚಾರದ ಹಿನ್ನೆಲೆಯಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net