ಸ್ಕೌಟ್ಸ್ ಚಟುವಟಿಕೆಯಿಂದ ಸೇವಾ ಮನೋಭಾವ : ಆಳ್ವಾಸ್‌ ಪಿಯು ಕಾಲೇಜಿನಲ್ಲಿ ಉಪನ್ಯಾಸಕ ದಿನಕರ ಕೆ.ಅಭಿಮತ

New Project (12)
Published on

ಮೂಡುಬಿದಿರೆ: ಸ್ಕೌಟಿಂಗ್ ವಿದ್ಯಾರ್ಥಿಗಳಿಗೆ ನೈಜ ಜೀವನ ಅನುಭವ ನೀಡುತ್ತದೆ. ಸಹೋದರತ್ವ, ಸಮಾನತೆ ಹಾಗೂ ವಿಶಾಲ ಮನೋಭಾವ ಬೆಳೆಸುತ್ತದೆ. ಯುವಪೀಳಿಗೆ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸ್ಕೌಟಿಂಗ್ ಚಟುವಟಿಕೆಗಳು ಸಮಯಪಾಲನೆ, ಶೈಕ್ಷಣಿಕ ಯಶಸ್ಸು ಮತ್ತು ಸಮಾಜಮುಖಿ ಬದುಕನ್ನು ರೂಪಿಸುವ ಮನೋಬಲವನ್ನು ಬೆಳೆಸುತ್ತದೆ ಎಂದು ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ದಿನಕರ ಕೆ.ಹೇಳಿದರು.

ಆಳ್ವಾಸ್ ಪ.ಪೂ.ಕಾಲೇಜಿನ 2025-26ನೇ ಸಾಲಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಸದಕತ್ ಅಧ್ಯಕ್ಷತೆ ವಹಿಸಿದರು. ಉಪಪ್ರಾಂಶುಪಾಲೆ ಜಾನ್ಸಿ ಪಿ.ಎನ್., ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ರೋವರ್ಸ್ ಸ್ಕೌಟ್ಸ್ ಲೀಡರ್ ಸುನೀಲ್, ರೇಂಜರ್ಸ್ ಲೀಡರ್ ವೀಣಾ ಆಗ್ನೇಸ್ ಡಿಸೋಜ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕಿರಣ್ ಸ್ವಾಗತಿಸಿ, ಪೌರವಿ ಅತಿಥಿಗಳನ್ನು ಪರಿಚಯಿಸಿ, ಶ್ರೇಯಾ ವಂದಿಸಿ, ಸಿದ್ದೇಶ್ ನಿರೂಪಿಸಿದರು. ವಿದ್ಯಾರ್ಥಿಗಳು ರೋವರ್ಸ್-ರೇಂಜರ್ಸ್‌ನ ಕುರಿತ ನಾಟಕ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net