೨೨ರಂದು ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ

Published on

ಡಾ.ಶಿವರಾಮ ಕಾರಂತರು ೧೯೩೧ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ ಪುತ್ತೂರು ದಸರಾ ನಾಡಹಬ್ಬ ೭೧ನೇ ವರ್ಷದ ಕಾರ್ಯಕ್ರಮ ಸೆ.೨೨ರಿಂದ ಅ.೨ರವರೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಹೇಳಿದರು.

೨೨ರಂದು ಸಂಜೆ ೬.೩೦ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಉದ್ಘಾಟಿಸಲಿದ್ದಾರೆ. ೨೩ರಂದು ಸಂಜೆ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಭಾರ್ಯರಿಂದ ಉಪನ್ಯಾಸ, ಮಹಿಳಾ ಯಕ್ಷಗಾನ ದಕ್ಷಯಜ್ಞ, ೨೪ಕ್ಕೆ ಶಿಕ್ಷಕ ಪ್ರದೀಪ್‌ರಿಂದ ಉಪನ್ಯಾಸ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸೆ.೨೫ಕ್ಕೆ ಸಂಜೆ ಕಸಾಪ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್‌ರಿಂದ ಉಪನ್ಯಾಸ, ಯಕ್ಷ ವೈಭವ ಪ್ರದರ್ಶನ, ೨೬ಕ್ಕೆ ಸಂಜೆ ತುಳು ಲಿಪಿ ಶಿಕ್ಷಕಿ ವಿದ್ಯಾಶ್ರೀ ಎಸ್. ಉಪನ್ಯಾಸ, ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೨೭ರಂದು ಸಂಜೆ ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ಉಪನ್ಯಾಸ, ಭರತನಾಟ್ಯ ಪ್ರದರ್ಶನ, ೨೮ಕ್ಕೆ ಸಂಜೆ ರಾಷ್ಟ್ರೀಯ ಸೇನಾದಳ ಕುರಿತು ಮೇಜರ್ ಎಂ.ಎನ್.ಚೆಟ್ಟಿಯಾರ್ ಉಪನ್ಯಾಸ, ನೃತ್ಯೋತ್ಸವಂ ಪ್ರದರ್ಶನ, ೨೯ಕ್ಕೆ ಸಂಜೆ ನಿವೃತ್ತ ಶಿಕ್ಷಣಾಽಕಾರಿ ಎಸ್.ಜಿ.ಕೃಷ್ಣರಿಂದ ಉಪನ್ಯಾಸ, ಸಾಂಸ್ಕೃತಿಕ ವೈಭವ, ೩೦ಕ್ಕೆ ಸಂಜೆ ಕಲ್ಲಡ್ಕ ಶ್ರೀರಾಮ ಶಾಲೆಯ ಪ್ರಾಂಶುಪಾಲ ಯತಿರಾಜ್ ಪೆರಾಜೆ ಉಪನ್ಯಾಸ, ವಿದುಷಿ ಸ್ವರ್ಣ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.೧ಕ್ಕೆ ಸಮಾರೋಪದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಗಾನ ವೈಭವ, ಅ.೨ಕ್ಕೆ ಬೆಳಗ್ಗೆ ೯.೩೦ರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್, ಕಾರ್ಯದರ್ಶಿ ಎಂ.ಟಿ.ಜಯರಾಮ ಭಟ್, ಉಪಾಧ್ಯಕ್ಷ ಈಶ್ವರಚಂದ್ರ ಡಿ.ಎನ್. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net