ನುಸುಳುಕೋರರನ್ನು ಗಡಿಪಾರು ಮಾಡಲು ಮನವಿ

nasulakoraru
ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಗಡಿಪಾರು ವಾಡಬೇಕೆಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಲಾಯಿತು.
Published on

ಉಡುಪಿ: ಭಾರತದ ನೆರೆಯ ದೇಶ ಬಾಂಗ್ಲಾದಲ್ಲಿ ಇತ್ತೀಚೆಗೆ ರಾಜಕೀಯ ಕ್ಷಿಪ್ರ ಕ್ರಾಂತಿಯಾಗಿ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಪಸಂಖ್ಯಾತರಾದ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ಹಾಗೂ ದಬ್ಬಾಳಿಕೆ ಮಾಡುತ್ತಿದ್ದಾರೆ. ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲಿಮರನ್ನು ಕೂಡಲೇ ಭಾರತದಿಂದ ಗಡಿಪಾರು ಮಾಡಬೇಕೆಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಲಾಯಿತು.

ಮುಖಂಡರಾದ ಸುದರ್ಶನ್ ಪೂಜಾರಿ, ಶರತ್ ಮಣಿಪಾಲ, ಸುಜಿತ್ ನಿಟ್ಟೂರು, ವಿಕ್ರಂ ಕುಂದರ್, ಸುದೀಪ್ ನಿಟ್ಟೂರು, ಅರುಣ್ ಕುರ್ಕಾಲು, ಮೋಹನ್ ಪೂಜಾರಿ ಕಾಪು, ಸುರೇಶ್ ಶೆಟ್ಟಿ ಶಿರ್ವ, ಸುಧೀರ್ ಅಂಬಲಪಾಡಿ, ರಾಘವೇಂದ್ರ ಮಣಿಪಾಲ, ರಮೇಶ್, ಪ್ರದೀಪ್ ಅಂಬಲಪಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net