ಕೃಷಿ ಬದುಕಿನ ಆಚರಣೆ ಉಳಿವು : ಉದಯಕುಮಾರ್ ಶೆಟ್ಟಿ ಶೇಡಿಮನೆ ಸಲಹೆ

kesar
ಅಸಾಡಿಯಂಗ್ ಒಂದ್ ದಿನ ಗ್ಯದ್ದಿ ಬೈಲಾಂಗ್ ಕೆಸ್ರಾಟವನ್ನು ಉದಯಕುಮಾರ್ ಶೆಟ್ಟಿ ಶೇಡಿಮನೆ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಆರ್ಡಿ
ಯುವಜನತೆ ಆಧುನಿಕ ಜನಜೀವನಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಗ್ರಾಮೀಣ ಭಾಗದ ಕೃಷಿ ಬದುಕು, ಆಚರಣೆ ಮರೆಯಾಗುತ್ತಿವೆ. ಮುಂದಿನ ಯುವ ಪೀಳಿಗೆ ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ಯದ್ದಿ ಬೈಲಾಂಗ್ ಕೆಸ್ರಾಟ ಕಾರ್ಯಕ್ರಮ ಪೂರಕವಾಗಿದೆ ಎಂದು ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಹೇಳಿದರು.

ಅರಸಮ್ಮಕಾನು ನವಶಕ್ತಿ ಯುವಕ ಮಂಡಲ, ಲಯನ್ಸ್ ಕ್ಲಬ್ ಆರ್ಡಿ-ಬೆಳ್ವೆ-ಗೋಳಿಯಂಗಡಿ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆ ಅಂಗವಾಗಿ ಅರಸಮ್ಮಕಾನು ಶಾಂತನಮಕ್ಕಿ ಗದ್ದೆಯಲ್ಲಿ ಅಸಾಡಿಯಂಗ್ ಒಂದ್ ದಿನ ಗ್ಯದ್ದಿ ಬೈಲಾಂಗ್ ಕೆಸ್ರಾಟ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ನವಶಕ್ತಿ ಯುವಕ ಮಂಡಲ ಅಧ್ಯಕ್ಷ ಕೀರ್ತಿಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಆರ್ಡಿ- ಬೆಳ್ವೆ- ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ ಯಳಂತೂರು, ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ, ವಲಯ ಕಾರ್ಯದರ್ಶಿ ವೈ. ಪಟ್ಟಾಭಿರಾಮ್ ಭಟ್ ಮರೂರು, ಮಾಜಿ ಕೋಶಾಧಿಕಾರಿ ಚಂದ್ರಿಕಾ ಬೆಳ್ವೆ, ಸದಸ್ಯ ಕೆ.ಸಂಜೀವ ಆರ್ಡಿ, ಸದಸ್ಯೆ ತೀರ್ಥಕಲಾ ಗುಮ್ಮೋಲ, ಲಿಯೋ ಕ್ಲಬ್ ಕಾರ್ಯದರ್ಶಿ ಸುಮಂತ್ ಶೆಟ್ಟಿ ಆರ್ಡಿ, ಗ್ರಾಪಂ ಸದಸ್ಯ ಸದಾನಂದ ಪೂಜಾರಿ, ನವಶಕ್ತಿ ಯುವಕ ಮಂಡಲದ ಗೌರವಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ ಹೆಗ್ಡೆ, ವಿಜಯಕುಮಾರ್ ಶೆಟ್ಟಿ ಸಾಂತನಮಕ್ಕಿ, ಗುಲಾಬಿ ಶೆಟ್ಟಿ ಸಾಂತನಮಕ್ಕಿ ಮತ್ತಿತರರು ಉಪಸ್ಥಿತರಿದ್ದರು. ಪ್ರದೀಪ ಹೆಗ್ಡೆ ಸ್ವಾಗತಿಸಿದರು. ಗಣೇಶ್ ಅರಸಮ್ಮಕಾನು ನಿರೂಪಿಸಿದರು. ವೆಂಕಟೇಶ್ ಉಳ್ಳೂರ್ ಹೆಗ್ಡೆ ವಂದಿಸಿದರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ನವಶಕ್ತಿ ಯುವಕ ಮಂಡಲ ಅಧ್ಯಕ್ಷ ಕೀರ್ತಿಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ರಮೇಶ್ ಕುಲಾಲ್, ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಚಂದ್ರ ನಾಯ್ಕ, ಅಧ್ಯಕ್ಷ ಪ್ರಕಾಶ್ ಕುಲಾಲ್, ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್ ಸ್ಥಾಪಾಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ, ಸದಸ್ಯ ಮಹಾಬಲ ನಾಯ್ಕ ಅಲ್ಬಾಡಿ, ವಲಯಾಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net