ಗಂಗಾಧರ ಶೆಟ್ಟಿ ಪುತ್ಥಳಿ ನಿರ್ಮಾಣಕ್ಕೆ ಮನವಿ

manavi
ಗಂಗಾಧರ ಶೆಟ್ಟಿ ಹೇರಿಕುದ್ರು ಅವರ ಸ್ಮರಣಾರ್ಥ ಹೇರಿಕುದ್ರು ಶಾಲೆ ರಸ್ತೆಗೆ ಗಂಗಾಧರ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವ ಹಾಗೂ ಗಂಗಾಧರ ಶೆಟ್ಟಿ ಪುತ್ಥಳಿ ನಿರ್ಮಾಣ ಮಾಡುವಂತೆ ಹೇರಿಕುದ್ರು ಗ್ರಾಮಸ್ಥರು ಆನಗಳ್ಳಿ ಗ್ರಾಪಂಗೆ ಮನವಿ ಸಲ್ಲಿಸಿದರು
Published on

ಗಂಗೊಳ್ಳಿ: ಗಂಗಾಧರ ಶೆಟ್ಟಿ ಹೇರಿಕುದ್ರು ಸ್ಮರಣಾರ್ಥ ಹೇರಿಕುದ್ರು ಶಾಲೆ ರಸ್ತೆಗೆ ಗಂಗಾಧರ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಬೇಕು ಹಾಗೂ ಗಂಗಾಧರ ಶೆಟ್ಟಿ ಪುತ್ಥಳಿ ನಿರ್ಮಾಣ ಮಾಡುವಂತೆ ಹೇರಿಕುದ್ರು ಗ್ರಾಮಸ್ಥರು ಆನಗಳ್ಳಿ ಗ್ರಾಪಂಗೆ ಮನವಿ ಸಲ್ಲಿಸಿದರು.

ಆನಗಳ್ಳಿ ಗ್ರಾಪಂನ ದೀರ್ಘಾವಧಿ ಸದಸ್ಯರಾಗಿ ಮತ್ತು ಜನರ ಪ್ರೀತಿ ಪಾತ್ರರಾಗಿದ್ದ ಗಂಗಾಧರ ಶೆಟ್ಟಿಯವರ ಅಕಾಲಿಕ ಮರಣದಿಂದ ಗ್ರಾಮಸ್ಥರು ದುಃಖಿತರಾಗಿದ್ದಾರೆ. ಗಂಗಾಧರ ಶೆಟ್ಟಿ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಜನರಿಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಆದ್ದರಿಂದ ಪಂಚಾಯಿತಿನಲ್ಲಿ ನಿರ್ಣಯ ಕೈಗೊಂಡು ಹೇರಿಕುದ್ರು ರಸ್ತೆಗೆ ಗಂಗಾಧರ ಶೆಟ್ಟಿ ರಸ್ತೆ ನಾಮಕರಣ ಮಾಡಲು ಹಾಗೂ ಪುತ್ಥಳಿ ನಿರ್ಮಾಣ ಮಾಡಲು ಅನುಮತಿ ನೀಡಬೇಕು ಎಂದು ಗ್ರಾಮಸ್ಥರು ಪಂಚಾಯಿತಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net