ಸಾಲಿಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

saligrama
Published on

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ಮತ್ತು ಆಂಜನೇಯ ದೇವರ ಸಾನ್ನಿಧ್ಯದಲ್ಲಿ ಸಾಮೂಹಿಕ ಫಲ ಪ್ರಾರ್ಥನೆಯೊಂದಿಗೆ ದ್ವಾದಶಾವರ್ತನ ಪವಮಾನ ಪಾರಾಯಣ ಸಹಿತ ಪವಮಾನ ಹೋಮ, ದ್ವಾದಶ ನಾರಿಕೇಳ ಗಣಪತಿ ಯಾಗ ಮುಂತಾದ ಧಾರ್ಮಿಕ ಕಾರ್ಯಕ್ರಮ ದೇವಳ ತಂತ್ರಿ ಶ್ರೀಕೃಷ್ಣ ಸೋಮಯಾಜಿ ಮಾರ್ಗದರ್ಶನದಲ್ಲಿ ನಡೆಯಿತು.

ದೇವಳ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದಂಪತಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ, ಸದಸ್ಯರಾದ ಎ.ವಿ.ಶ್ರೀಧರ ಕಾರಂತ, ಮೀಯಪದವು ಎಂ.ಆರ್.ಶ್ರೀಧರ ರಾವ್ ದಂಪತಿ, ಗುಂಡ್ಮಿ ಚಂದ್ರಶೇಖರ ಉಪಾಧ್ಯ, ಕಾರ್ಕಡ ತಾರಾನಾಥ ಹೊಳ್ಳ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ಪಾರಂಪಳ್ಳಿ ಶ್ರೀನಿವಾಸ ಉಪಾಧ್ಯ, ಗುಂಡ್ಮಿ ವೆಂಕಟೇಶ ಮಯ್ಯ, ಗ್ರಾಮ ಮೊಕ್ತೇಸರರು, ಭಕ್ತರು ಉಪಸ್ಥಿತರಿದ್ದರು.

9ರಂದು ಯಾತ್ರಿ ನಿವಾಸ ಉದ್ಘಾಟನೆ

ಮಾ.4ರಿಂದ ಆರಂಭಗೊಂಡು 8ರವರೆಗೆ ಲಕ್ಷ ಮೋದಕ ಗಣಪತಿ ಯಾಗ ಸಂಪನ್ನಗೊಳ್ಳಲಿದ್ದು, 8ರಂದು ಸಂಜೆ ನೂತನ ಶ್ರೀ ಗುರುಧಾಮ ಯಾತ್ರಿ ನಿವಾಸದಲ್ಲಿ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಸುದರ್ಶನ ಹೋಮ ನಡೆಯಲಿದೆ. 9ರಂದು ದೇವಳದಲ್ಲಿ 1008ರಲ್ಲಿ ನೃಸಿಂಹಹೋಮ, 11.30ಕ್ಕೆ ಕರ್ನಾಟಕ ಸರ್ಕಾರ ಪೂರ್ವ ಅಡ್ವಕೇಟ್ ಜನರಲ್ ಉದಯ ಹೊಳ್ಳ ಯಾತ್ರಿ ನಿವಾಸ ಉದ್ಘಾಟಿಸುವರು. ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಧ್ಯಕ್ಷತೆ ವಹಿಸುವರು. ದಾನಿಗಳನ್ನು ಅಭಿನಂದಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net