ಜಿನಮಂದಿರದಲ್ಲಿ ತುಳು ಭಕ್ತಿಗೀತೆ ಬಿಡುಗಡೆ

song
ಸವಣೂರಿನ ಪ್ರಖ್ಯಾತ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಶ್ರೀ ಪದ್ಮಾವತಿ ದೇವಿಯ ತುಳು ಭಕ್ತಿಗೀತೆ ಬಿಡುಗಡೆ ಗೊಳಿಸಲಾಯಿತು.
Published on

ಕಡಬ: ಸವಣೂರಿನ ಪ್ರಖ್ಯಾತ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಶ್ರೀ ಪದ್ಮಾವತಿ ದೇವಿಯ ತುಳು ಭಕ್ತಿಗೀತೆ ‘ಪುದ್ದೊಟ್ಟುದಪ್ಪೆ ಪದ್ಮಾವತಿ’ಯನ್ನು ಜಿನಮಂದಿರದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.

ಮಮತಾ, ಯತೀಶ್, ಬೇಬಿ ಕಾಶ್ನಿ ಕಾನಾವುಜಾಲು ನಿರ್ಮಾಣದ ಹರೀಶ್ ಮಂಜೊಟ್ಟಿ ಸಾಹಿತ್ಯ ರಚಿಸಿ, ಗಾಯಕರಾದ ಗುಣಪಾಲ್ ಮತ್ತು ಚೇತನಾ ಹಾಡಿರುವ ಈ ಭಕ್ತಿಗೀತೆ ಮಂದಾರ ಕ್ರಿಯೆಷನ್ಸ್ ಅರ್ಪಿಸಿದ ತುಳು ಭಕ್ತಿಗೀತೆ ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆ ಸಂಚಾಲಕ ಸೀತಾರಾಮ ರೈ ಸವಣೂರು ಪುದುಬೆಟ್ಟು ಜಿನಮಂದಿರದಲ್ಲಿ ಬಿಡುಗಡೆಗೊಳಿಸಿದರು. ಜಿನಮಂದಿರದ ಆಡಳಿತ ಮೊಕ್ತೇಸರ ಬೆಳಂದೂರು ಗುತ್ತು ಶತ್ರುಂಜಯ ಆರಿಗ, ದೇವಾಲಯದ ಅರ್ಚಕ ಶ್ರೇಯಾಂಸ್ ಕುಮಾರ್ ಇಂದ್ರ, ಭರತ್ ಕೆಮ್ಮಾರ, ಸಚಿನ್ ಭಂಡಾರಿ ಸವಣೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net