

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನವನ್ನು ಬಾಳ್ತಿಲ ಗ್ರಾಮದ ಸುಧೆಕ್ಕಾರು ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ ಆಚರಿಸಿದರು. ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಗಿಡವನ್ನು ನೆಡುವುದರ ಮೂಲಕ ಚಾಲನೆ ನೀಡಿದರು.
ಬಂಟ್ವಾಳ ವಲಯ ಉಪ ಅರಣ್ಯಾಧಿಕಾರಿ, ರವಿರಾಜ್ ಬಿ.ಮಾತನಾಡಿ, ಗಿಡವನ್ನು ನೆಡುವುದರಿಂದ ಸುತ್ತಮುತ್ತಲಿನ ವಾತಾವರಣ ತಂಪಾಗಿರುತ್ತದೆ. ನಮ್ಮ ಆರೋಗ್ಯವು ಚೆನ್ನಾಗಿರುವುದರ ಜತೆಗೆ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗುತ್ತದೆ. ಪರಿಸರ ದಿನಾಚರಣೆಗೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪರಿಸರದ ಕಾಳಜಿಯಿಂದ ಉಳಿದ ಸಂದರ್ಭದಲ್ಲಿಯು ಮನೆ ಹಾಗೂ ಶಾಲೆಯ ಸುತ್ತಮುತ್ತ ಗಿಡ ನೆಟ್ಟು ನೀರು ಹಾಕಿ ಬೆಳೆಸಿ, ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರು.
ಶಿಕ್ಷಕ ಸುಮಂತ್ ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿನಿ ಮಾನಸ ವೈಯಕ್ತಿಕ ಗೀತೆ ಹಾಡಿದರು. ಮಾಣಿ ವಲಯ ಗಸ್ತು ವನಪಾಲಕ ರಾಘವೇಂದ್ರ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ್ ಸಾಲ್ಯಾನ್, ಜಯರಾಮ ಸುಧೆಕ್ಕಾರು, ಮುಖ್ಯಶಿಕ್ಷಕ ರವಿರಾಜ್ ಕಣಂತೂರು, ಪಿ.ಕೆ.ಪದ್ಮನಾಭ, ಶಿಕ್ಷಕಿಯರಾದ ಅನ್ನಪೂರ್ಣ, ಜ್ಯೋತಿಶ್ರೀ, ರಕ್ಷಿತಾ, ಬಾಲಕೃಷ್ಣ, ವಾಣಿಶ್ರೀ, ಮಾಲತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಧನ್ಯ ಸ್ವಾಗತಿಸಿ, ಪ್ರಾಪ್ತಿ ನಿರೂಪಿಸಿ, ಶಶಾಂಕ ವಂದಿಸಿದರು.