ಅರಸು ಸಂಕಲ ಮಾಡದ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ

New Project (17)
Published on

ಮಂಜೇಶ್ವರ: ಸಂತಡ್ಕ ಶ್ರೀಕ್ಷೇತ್ರ ಅರಸು ಸಂಕಲ ಮಾಡದ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಜ.19ರಿಂದ 24ರವರೆಗೆ ಜರುಗಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅಧ್ಯಕ್ಷ ಡಾ.ಶ್ರೀಧರ ಭಟ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಉದ್ಯಾವರ ಅರಸು ಮಂಜಿಷ್ಣಾರ್ ಮಾಡದ ರಾಜ ಬೆಳ್ಚಪ್ಪಾಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಸಂತ ಭಟ್ ತೊಟ್ಟೆತ್ತೋಡಿ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗುರು ಸ್ವಾಮಿಗಳಾದ ಸಂಜೀವ ಶೆಟ್ಟಿ ಮಾಡ, ಸುಣ್ಣಾರ ಬೀಡು ಕ್ಷೇತ್ರದ ರಾಮಚಂದ್ರ ಪೂಜಾರಿ ಸುಣ್ಣಾರ, ಪ್ರದೀಪ್ ಸುಣ್ಣಾರ ಬೀಡು, ದಿನೇಶ್ ಪೂಂಜ ಕುಳೂರು, ನಾರಾಯಣ ರಾವ್ ಎಂ.ಜಿ., ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಪಂಚಾಯಿತಿ ಸದಸ್ಯರಾದ ಬಾಬು ಸಿ., ಕೃಷ್ಣ ಶೆಟ್ಟಿ ಕಲ್ಲಾಯಿ, ಐತಪ್ಪ ಶೆಟ್ಟಿಗಾರ್ ನೀರಹಳ್ಳಿ, ಸಾಹಿತ್ ಶೆಟ್ಟಿ ಮಾನೂರು ಮೊದಲಾದವರಿದ್ದರು. ಉಪಾಧ್ಯಕ್ಷ ಅರವಿಂದಾಕ್ಷ ಭಂಡಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net