ಕಲಿಕೆಗೆ ಕ್ರಿಯಾಶೀಲತೆ, ಸೃಜನಶೀಲತೆ ಮುಖ್ಯ : ಮಿಥಾಲಿ ಪಿ.ರೈ ಪ್ರತಿಪಾದನೆ

New Project (14)
Published on

ಸುಳ್ಯ: ಜೀವನದಲ್ಲಿ ಕಲಿಕೆ ನಿರಂತರವಾದುದಾಗಿದ್ದು ಕಲಿಕೆಗೆ ಕ್ರಿಯಾಶೀಲತೆ, ಸೃಜನಶೀಲತೆ ಬಹಳ ಮುಖ್ಯ ಎಂದು ನಗರದ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ.ರೈ ಹೇಳಿದರು.

ಕಾಲೇಜಿನ ಮಾನವಿಕ, ವಾಣಿಜ್ಯ ಸಂಘದ ವತಿಯಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪುಷ್ಪರಾಜ್ ಕೆ., ಪದವಿ ವಿಭಾಗದ ಪ್ರಾಂಶುಪಾಲ ಪ್ರೊ.ರುದ್ರಕುಮಾರ್ ಎಂ.ಎಂ.ಮೊದಲಾದವರು ಭಾಗವಹಿಸಿದ್ದರು.

ಶರಣ್ಯ ಮತ್ತು ಬಳಗ ಪ್ರಾರ್ಥಿಸಿದರು. ಉಪನ್ಯಾಸಕಿ ಸಾವಿತ್ರಿ ಕೆ.ಸ್ವಾಗತಿಸಿದರು. ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ಅತಿಥಿ ಪರಿಚಯಿಸಿದರು. ಮಾನವಿಕ ವಿಭಾಗದ ಸಂಚಾಲಕಿ ರೇಷ್ಮಾ ಎಂ.ಎಂ. ವಂದಿಸಿದರು. ಉಪನ್ಯಾಸಕಿಯರಾದ ಬೇಬಿ ವಿದ್ಯಾ ಪಿ.ಬಿ., ಹರ್ಷಿತಾ ಎ.ಬಿ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net