ಉಪ್ಪಿನಂಗಡಿಯಲ್ಲಿ ಚಿಣ್ಣರ ಚಿಲಿಪಿಲಿ

New Project (5)
Published on

ಉಪ್ಪಿನಂಗಡಿ: ಉತ್ತಮ ಸಂಸ್ಕಾರ ಉತ್ತಮ ಫಲವನ್ನು ನೀಡುತ್ತದೆ ಎನ್ನುವುದಕ್ಕೆ ಶಿಶು ಮಂದಿರದಲ್ಲಿನ ಮಕ್ಕಳ ಸಾಮರ್ಥ್ಯ ಕಂಡಾಗ ಅರಿವಾಗುತ್ತಿದೆ ಎಂದು ಶ್ರೀ ಮಾಧವ ಶಿಶು ಮಂದಿರದ ಪಾಲಕರ ಸಂಘದ ಅಧ್ಯಕ್ಷೆ ಶ್ರೀದೇವಿ ಹೇಳಿದರು.

ಉಪ್ಪಿನಂಗಡಿ ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ಶನಿವಾರ ಪುಟಾಣಿ ಮಕ್ಕಳಿಂದಲೇ ನಿರ್ವಹಿಸಲ್ಪಟ್ಟ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭವ್ಯ, ಶಿಶು ಮಂದಿರ ಆಡಳಿತ ಮಂಡಳಿಯ ಜಯಶ್ರೀ ಜನಾರ್ದನ್, ವಿಶ್ವನಾಥ ಶೆಟ್ಟಿ ಕಂಗ್ವೆ, ಹರಿರಾಮಚಂದ್ರ, ಉದಯ್ ಕುಮಾರ್ ಮಾತನಾಡಿದರು. ಸಭಾ ಕಾರ್ಯಕ್ರವನ್ನು ಪುಟಾಣಿ ಶಾರ್ವಿ ನಿರ್ವಹಿಸಿದ್ದು, ಪುಟಾಣಿಗಳಾದ ನಿಶಿತಾ ಸ್ವಾಗತಿಸಿ, ಸುಧರ್ಮ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಪುಟಾಣಿ ಅತೀಕ್ಷ್ ನಿರ್ವಹಿಸಿದರು. ಶಿಶು ಮಂದಿರದ ಶಿಕ್ಷಕಿಯರಾದ ಚೈತ್ರಾ, ಕಾಂತಿಮಣಿ ಹಾಗೂ ಚಂದ್ರಾವತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net