ಬಜಪ್ಪಿಲ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ

New Project (12)
Published on

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಡಿ.21 ಮತ್ತು 22ರಂದು ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಶುಕ್ರವಾರ ಕ್ಷೇತ್ರದಲ್ಲಿ ನಡೆಯಿತು.

ಬಜಪ್ಪಿಲ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಹೇಮಂತ್ ಕುಮಾರ್ ಗೌಡರಮನೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡ ಆಮಂತ್ರಣ ಬಿಡುಗಡೆಗೊಳಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಅಂಬ್ರೋಟಿ ಮುಚ್ಚಿರಡಿ ದೈವಸ್ಥಾನದ ಪ್ರಮುಖರಾದ ಲಕ್ಷ್ಮಣ ಗೌಡ ಕುಕ್ಕೆಟ್ಟಿ, ಅತ್ಯಾಡಿ ದೈವಸ್ಥಾನದ ಚೆನ್ನಪ್ಪ ಗೌಡ ಅತ್ಯಾಡಿ, ನಾರಾಲು ದೈವಸ್ಥಾನದ ಉಮೇಶ ನಾರಾಲು, ಕರ್ಲಪ್ಪಾಡಿ ಕ್ಷೇತ್ರದ ರೂಪಾನಂದ ಕರ್ಲಪ್ಪಾಡಿ ಶುಭ ಹಾರೈಸಿದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಸ್ವಾಗತಿಸಿದರು. ತೀರ್ಥೇಶ್ ಬಲಂದೋಟಿ ವಂದಿಸಿದರು. ಮಂಜುನಾಥ್ ಪೇರಾಲು ಪರಪ್ಪು ನಿರೂಪಿಸಿದರು. ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಬಜಪ್ಪಿಲ ಕ್ಷೇತ್ರಕ್ಕೊಳಪಟ್ಟ ಪ್ರಮುಖರು, ಊರವರು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net