ಅಂಗವಿಕಲ ಭದ್ರತಾ ಯೋಜನೆ ನಿಬಂಧನೆ ಸಡಿಲಿಕೆ

Published on

ಕಾಸರಗೋಡು: ಅಂಗವಿಕಲರಿಗಾಗಿ ಸಾಮಾಜಿಕ ನ್ಯಾಯ ಇಲಾಖೆ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳ ಪರಿಷ್ಕೃತ ನಿಯಮಾವಳಿ ಜಾರಿಗೆ ತರಲಾಗಿದೆ.

ಅಂಗವಿಕಲ ಪಾಲಕರ ಮಕ್ಕಳಿಗೆ ವಿದ್ಯಾಕಿರಣ ಯೋಜನೆಯನ್ವಯ ದೊರಕುವ ಶೈಕ್ಷಣಿಕ ವಿದ್ಯಾರ್ಥಿವೇತನ ಯೋಜನೆ ಎರಡು ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಆ ನಿಬಂಧನೆ ತೆಗೆಯಲಾಗಿದೆ.

ಈ ವರ್ಷದಿಂದ ಎಲ್ಲ ಅಂಗವಿಕಲ ಮಕ್ಕಳು ವಿದ್ಯಾಕಿರಣಂ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ, ಅನುದಾನಿತ ವಿದ್ಯಾಸಂಸ್ಥೆಗಳ ಜತೆ, ಸ್ವಾಶ್ರಯ ಸಂಸ್ಥೆಗಳು ಸಹ ವಿದ್ಯಾರ್ಥಿವೇತನಕ್ಕೆ ಅರ್ಹವಾಗಿರುತ್ತವೆ. ಅಂಗವಿಕಲ ತಾಯಂದಿರಿಗೆ ಪ್ರಸವಾನಂತರದ ಮಕ್ಕಳ ಆರೈಕೆಗಾಗಿ ಇರುವ ಆರ್ಥಿಕ ಯೋಜನೆ ಮಾತೃಜ್ಯೋತಿಯಲ್ಲಿ ಶೇಕಡಾ 60ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಗವಿಕಲರು ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಂಗವಿಕಲರ ಶೇಕಡಾವಾರು ಪ್ರಮಾಣ ಕ್ರೋಡೀಕರಿಸಿ, ಬದಲಾಯಿಸಲಾಗಿದೆ.

ಪ್ರಸಕ್ತ ವಿವಿಧ ಅಂಗವೈಕಲ್ಯಗಳಿಗೆ ವಿವಿಧ ಹಂತಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸ್ವಾಶ್ರಯ, ತುರ್ತು ಸಂದರ್ಭಗಳಲ್ಲಿ ಅಂಗವಿಕಲರಿಗೆ ವೈದ್ಯಕೀಯ ಆರ್ಥಿಕ ನೆರವು ನೀಡುವ ಯೋಜನೆ, ತುರ್ತು ಸಂದರ್ಭಗಳಲ್ಲಿ ತಜ್ಞರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ವೆಚ್ಚಗಳಿಗೆ ಹಣ ಒದಗಿಸಲಾಗುತ್ತದೆ. ಅಲ್ಲದೆ, ತೀವ್ರ ಅಂಗವೈಕಲ್ಯ ಹೊಂದಿರುವವರು ಮತ್ತು ಮನೆಯ ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದ ಅಂಗವಿಕಲರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸಾಮಾಜಿಕ ನ್ಯಾಯ ಇಲಾಖೆಯ ವೆಬ್‌ಸೈಟ್ www.suneethi.sjd.kerala.gov.in ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ (04994255074) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net