

ಬೆಳ್ತಂಗಡಿ: ಸಮಾಜವನ್ನು ಸನ್ಮಾರ್ಗದ ಕಡೆಗೆ ಕೊಂಡುಹೋಗುವ ಕೆಲಸ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಯೋಜನೆಯ ಮೂಲಕ ಮಾಡುತ್ತಿದ್ದಾರೆ. ಯೋಜನೆಯಿಂದಾಗಿ ಇಂದು ಮಹತ್ತರ ಪರಿವರ್ತನೆಯಾಗಿದ್ದು ಕಟ್ಟಕಡೆಯ ಕುಟುಂಬವೂ ಮುಖ್ಯವಾಹಿನಿಗೆ ಬರುವಂತಾಗಿದೆ ಎಂದು ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದುಗ್ಗೇಗೌಡ ಹೇಳಿದರು.
ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ತಣ್ಣೀರುಪಂಥ ವಲಯದ ಕರಾಯ ಕಲ್ಲೇರಿ, ಕುಪ್ಪೆಟ್ಟಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಉದ್ಯಮಿ ಶಿವಶಂಕರ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ತಣ್ಣೀರು ಪಂಥ ವಲಯ ಅಧ್ಯಕ್ಷ ರಾಮಣ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎ.ಕಾಸಿಂ ಮಲ್ಲಿಗೆಮನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ, ಬಾವಂತಬೆಟ್ಟು ಕಲ್ಲೇರಿ ರಾಜೇಶ್ ಜೈನ್, ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಕಲ್ಲೇರಿಯ ಲಿಂಗಪ್ಪ ನಾಯ್ಕ, ಶ್ರೀರಾಮ ಶಾಲೆ ಉಪ್ಪಿನಂಗಡಿ ಅಧ್ಯಕ್ಷ ಸುನೀಲ್ ಅಣವು, ತಣ್ಣೀರುಪಂಥ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಕೃಷಿಕ ಪ್ರವೀಣ್ ರೈ ಕುಪ್ಪೆಟ್ಟಿ, ತಣ್ಣೀರುಪಂಥ ಗ್ರಾಪಂ ಸದಸ್ಯ ಸಾಮ್ರಾಟ್ ಕರ್ಕೇರ, ಕಲ್ಲೇರಿ ಒಕ್ಕೂಟದ ನೂತನ ಅಧ್ಯಕ್ಷ ರವೀಂದ್ರ, ಕರಾಯ ಒಕ್ಕೂಟದ ನೂತನ ಅಧ್ಯಕ್ಷ ರಾಜಶೇಖರ ರೈ, ನಿಕಟಪೂರ್ವ ಅಧ್ಯಕ್ಷ ರಘುರಾಮ ಶೆಟ್ಟಿ, ಕುಪ್ಪೆಟ್ಟಿ ಒಕ್ಕೂಟದ ನೂತನ ಅಧ್ಯಕ್ಷ ಡೀಕಯ್ಯ ಗೌಡ, ಸೇವಾ ಪ್ರತಿನಿಧಿಗಳಾದ ಸಂಧ್ಯಾ, ವೇದಾವತಿ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಗುಣಕರ್ ನಿರೂಪಿಸಿದರು. ಕರಾಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುಜಾತಾ ವರದಿ ಮಂಡಿಸಿದರು.