ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಆಂಬುಲೆನ್ಸ್ ಕೋಚ್ : ರೈಲ್ವೆ ಸಂರಕ್ಷಣಾ ವೇದಿಕೆ ಆಗ್ರಹ

New Project (44)
Published on

ಕಾಸರಗೋಡು: ಮಂಗಳೂರಿನಿಂದ ತಿರುವನಂತಪುರಕ್ಕೆ ಹೋಗುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಆಂಬುಲೆನ್ಸ್ ಕೋಚ್ ಅಳವಡಿಕೆಗೆ ಅನುಮತಿ ನೀಡಬೇಕು ಎಂದು ರೈಲ್ವೆ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.

ಮುಖ್ಯ ರೈಲು ನಿಲ್ದಾಣಗಳಾದ ಕಾಸರಗೋಡು, ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ಕೋಯಿಕ್ಕೋಡು ಸೇರಿದಂತೆ ಮಲಬಾರ್ ಪ್ರದೇಶದಿಂದ ನೂರಾರು ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರದ ಪ್ರಾದೇಶಿಕ ಕ್ಯಾನ್ಸರ್ ಸೆಂಟರ್(ಆರ್‌ಸಿಸಿ) ಮತ್ತು ಶ್ರೀ ಚಿತ್ರಾ ಮುಂತಾದ ಆಸ್ಪತ್ರೆಗಳಿಗೆ ಪ್ರತಿನಿತ್ಯ ಭೇಟಿ ನೀಡುತ್ತಿದ್ದಾರೆ. ಇದರ ಜತೆಗೆ ತಾಸಿನೊಳಗೆ ಚಿಕಿತ್ಸೆ ಪಡೆಯಬೇಕಾದ ರೋಗಿಗಳನ್ನು ರಸ್ತೆ ಮಾರ್ಗವಾಗಿ ಸಾಗಿಸಬೇಕಾಗುತ್ತಿರುವುದರಿಂದ ಇದಕ್ಕೆ ಹೆಚ್ಚಿನ ಕಾಲಾವಕಾಶ ತಗಲುತ್ತಿದೆ. ಇದರಿಂದ ಬಹುತೇಕ ಸಂದರ್ಭ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗುತ್ತಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಂದೇ ಭಾರತ್ ರೈಲಿನಲ್ಲಿ ಆಂಬುಲೆನ್ಸ್ ಕೋಚ್ ಅಳವಡಿಸುವಂತೆ ಕಾಞಂಗಾಟ್‌ನಲ್ಲಿ ನಡೆದ ರೈಲ್ವೆ ಸಂರಕ್ಷಣಾ ವೇದಿಕೆ ಸಮಿತಿ ಸಂಬಂಧಪಟ್ಟವರನ್ನು ಒತ್ತಾಯಿಸಿದೆ.

ಮಾನವ ಹಕ್ಕುಗಳ ಹೋರಾಟಗಾರ ಕೂಕಲ್ ಬಾಲಕೃಷ್ಣನ್ ಸಭೆ ಉದ್ಘಾಟಿಸಿದರು. ಸಂಯೋಜಕ ಸಿ.ಕೆ.ನಾಸರ್ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net