133 ವರ್ಷ ಬಳಿಕ ಬೆಂಗಳೂರಲ್ಲಿ ದಾಖಲೆ ವರ್ಷಧಾರೆ: ಒಂದೇ ದಿನ 111 ಮಿಮೀ ಸುರಿದ ಮಳೆ

highest rainfall
Published on

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ಸುರಿದ ಮಳೆ ಹೊಸ ದಾಖಲೆ ಬರೆದಿದೆ. 133 ವರ್ಷ ಬಳಿಕ ಸಿಲಿಕಾನ್​ ಸಿಟಿಯಲ್ಲಿ ದಾಖಲೆ ವರ್ಷಧಾರೆಯಾಗಿದೆ.

2024ರ ಜೂ 2ರಂದು ಒಂದೇ ದಿನ 111 ಮಿಮೀ ಮಳೆ ಬಿದ್ದಿದೆ. 1891ರ ಜೂ 16ರಂದು 101 ಮಿಮೀ ಮಳೆಯಾಗಿತ್ತು. ನಂತರ 2013 ಜೂ 1ರಂದು 100 ಮಿಮೀ, 2009 ಜೂ11ರಂದು 89 ಮಿಮೀ ಮಳೆಯಾಗಿತ್ತು. ಒಂದೇ ದಿನದಲ್ಲೇ ಸುರಿದ ಮುಂಗಾರುನ ವರುಣಾರ್ಭಟಕ್ಕೆ ಹಳೆಯ ದಾಖಲೆ ಅಳಿಸಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಜೂನ್​ ತಿಂಗಳ ವಾಡಿಕೆ ಮಳೆ ಪ್ರಮಾಣ 110 ಮಿಮೀ. ಆದರೆ, ಎರಡು ದಿನದಲ್ಲಿ 140 ಮಿಮೀ ಮಳೆ ಸುರಿದಿದೆ.

ಹಂಪೆನಗರದಲ್ಲಿ ಹೆಚ್ಚು: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್​ಎನ್​ಡಿಎಂಸಿ) ಮಾಹಿತಿ ಪ್ರಕಾರ, ಭಾನುವಾರ ಹಂಪಿ ನಗರದಲ್ಲಿ ಅತಿ ಹೆಚ್ಚು ಅಂದರೆ 111 ಮಿಮೀ ಸುರಿದಿದೆ. ಮಾರುತಿ ಮಂದಿರ ವಾರ್ಡ್​ 89 ಮಿಮೀ, ವಿದ್ಯಾಪಿಠ 88 ಮಿಮೀ ಮತ್ತು ಕಾಟನ್​ಪೇಟೆ 87 ಮಿಮೀ ಸುರಿದಿದೆ. ನಗರದ ಹಲವೆಡೆ ಸುರಿಯುತ್ತಿರುವ ಮುಂದಿನ 4 ದಿನ ಮುಂದುವರಿಯಲಿದೆ. ಜೂ 4ರಿಂದ ಜೂ7 ರವರೆಗೆ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net