ಮೆಕ್ಸಿಕೋ ಇತಿಹಾಸದಲ್ಲಿ ಆಯ್ಕೆಯಾದ ಮೊದಲ ಮಹಿಳಾ ಅಧ್ಯಕ್ಷೆ ಇವರೇ ನೋಡಿ.!

1 Min Read
ಮೆಕ್ಸಿಕೋ ಇತಿಹಾಸದಲ್ಲಿ ಆಯ್ಕೆಯಾದ ಮೊದಲ ಮಹಿಳಾ ಅಧ್ಯಕ್ಷೆ ಇವರೇ ನೋಡಿ.!

ಮೆಕ್ಸಿಕೊ: ಮೆಕ್ಸಿಕೋ ಅಧ್ಯಕ್ಷೀಯ ಚುನಾವಣೆಯಲ್ಲಿ ಕ್ಲೌಡಿಯಾ ಶೇನ್​ಬಾಮ್​ ಭಾರೀ ಅಂತರದಿಂದ ಜಯಗಳಿಸಿದ್ದಾರೆ. ದೇಶದ 200 ವರ್ಷಗಳ ಇತಿಹಾಸದಲ್ಲಿ ಶೇನ್​ಬಾಮ್ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ.

ಇದನ್ನು ಓದಿ: ರಜನಿಕಾಂತ್​​ ಫ್ಯಾನ್ಸ್​ಗೆ ಡಬಲ್​ ಧಮಾಕಾ : ವೆಟ್ಟೈಯಾನ್ ಬಿಡುಗಡೆ ಜತೆಗೆ ಮುಂದಿನ ಪ್ರಾಜೆಕ್ಟ್​​​ ಸುಳಿವು ಕೊಟ್ರು ಸೂಪರ್​ಸ್ಟಾರ್​

ಶೇನ್​ಬಾಮ್​ ಅವರು ಅಧ್ಯಕ್ಷೀಯ ಸ್ಥಾನದ ರೇಸ್​ನಲ್ಲಿ 58.3 ರಿಂದ 60.7 ಪ್ರತಿಶತದಷ್ಟು ಮತಗಳನ್ನು ಪಡೆದು ವಿಜಯವನ್ನು ಸಾಧಿಸಿದ್ದಾರೆ ಎಂದು ಮೆಕ್ಸಿಕೋದ ಚುನಾವಣಾ ಸಂಸ್ಥೆಯು ಘೋಷಿಸಿತು. ಅವರ ಗೆಲುವು ಅತ್ಯಂತ ಐತಿಹಾಸಿಕವಾಗಿದ್ದು, ಅವರು ಮೆಕ್ಸಿಕೊದ ಮೊದಲ ಮಹಿಳಾ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಅಧ್ಯಕ್ಷರಾಗುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

“ನಾನು ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗುತ್ತೇನೆ. ಮೆಕ್ಸಿಕೋ ಶಾಂತಿಯುತ ಚುನಾವಣೆಗಳೊಂದಿಗೆ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ನಾವು ತೋರಿಸಿದ್ದೇವೆ. ಇತರ ಸಂದರ್ಭಗಳಲ್ಲಿ ಹೇಳಿದಂತೆ, ನಾನು ಒಬ್ಬಂಟಿಯಾಗಿ ಬರುವುದಿಲ್ಲ. ನಮ್ಮ ತಾಯ್ನಾಡನ್ನು ನಮಗೆ ನೀಡಿದ ನಮ್ಮ ನಾಯಕಿಯರು, ನಮ್ಮ ತಾಯಂದಿರು, ನಮ್ಮ ಹೆಣ್ಣುಮಕ್ಕಳು ನಾವೆಲ್ಲರೂ ಒಟ್ಟಿಗೆ ಬಂದಿದ್ದೇವೆ” ಎಂದು ಶೇನ್​ಬಾಮ್ ಹೇಳಿದರು.

ವಿರೋಧ ಪಕ್ಷದ ಸೆನೆಟರ್ ಮತ್ತು ಟೆಕ್ ಉದ್ಯಮಿಯಾದ ಮಾಜಿ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಸ್ಥಾನವನ್ನು ಶೇನ್‌ಬಾಮ್ ಅಲಂಕರಿಸಿದರು. ಮೆಕ್ಸಿಕೋದಲ್ಲಿ ನಡೆದ ಚುನಾವಣೆಯ ಫಲಿತಾಂಶ ಕುಟುಂಬ ರಾಜಕಾರಣವನ್ನು ಸಾರ್ವಜನಿಕರು ದೂರವಿಟ್ಟಿದ್ದಾರೆ ಎಂಬದುನ್ನು ತೋರಿಸಿದೆ.

ಸದ್ಯ ಮೆಕ್ಸಿಕೋ ಅಸಾಮಾನ್ಯ ಶಾಖ, ಬರ, ಮಾಲಿನ್ಯ ಮತ್ತು ರಾಜಕೀಯ ಹಿಂಸಾಚಾರದ ಹೆಚ್ಚಳದೊಂದಿಗೆ ಸೆಣಸಾಡುತ್ತಿದೆ. ಈಗ ಈ ದೊಡ್ಡ ಸಮಸ್ಯೆಗಳು ಮೆಕ್ಸಿಕೋದಲ್ಲಿ ಹೊಸದಾಗಿ ಚುನಾಯಿತ ಅಧ್ಯಕ್ಷೆ ಕ್ಲೌಡಿಯಾ ಶೇನ್​ಬಾಮ್​ ಅವರಿಗೆ ಎದುರಾಗಿರುವ ಸವಾಲಾಗಿದೆ.(ಏಜೆನ್ಸೀಸ್​​)

ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಅರೆಸ್ಟ್​​

See also  ಕ್ಷತ್ರಿಯ ಮರಾಠ ಸಮಾಜವನ್ನು 2ಎಗೆ ಸೇರಿಸಿ
Share This Article