ಮೂರು ದಿನದಿಂದ ರಮೇಶ್​ ಜಾರಕಿಹೊಳಿ ನಾಪತ್ತೆ! ಈಗ ಎಲ್ಲಿದ್ದಾರೆ?

ramesh jarakiholi cd
ramesh jarakiholi
Published on

ಬೆಂಗಳೂರು: ಸಿಡಿ ಕೇಸ್​ನಿಂದ ಭಾರಿ ಟೆನ್ಷನ್​ನಲ್ಲಿರುವ ರಮೇಶ್ ಜಾರಕಿಹೊಳಿ ಮೂರು ದಿನದಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರೇಕೆ ನಾಪತ್ತೆಯಾದರು? ಎಲ್ಲಿಯ ಅಜ್ಞಾತ ಸ್ಥಳದಲ್ಲಿ ಕೂತಿದ್ದಾರೆ? ಎಂಬ ಕುತೂಹಲ ಮೂಡಿದೆ.

ಮಾ.29ರಂದು ವಸಂತನಗರದ ಗುರುನಾನಕ್​ ಭವನದಲ್ಲಿ ನ್ಯಾಯಾಧೀಶರ ಮುಂದೆ ಹಾಜರ್​ ಆದ ಸಿಡಿ ಯುವತಿ, ಹೇಳಿಕೆ ಕೊಟ್ಟಿದ್ದಾಳೆ. ಬಳಿಕ ಎಸ್​ಐಟಿ ಪೊಲೀಸರು ಆಡುಗೋಡಿ ಟೆಕ್ನಿಕಲ್​ ಸೆಂಟರ್​ಗೆ ಕರೆದೊಯ್ದು ವಿಚಾರಣೆ ಮಾಡಿದೆ. ನಿನ್ನೆ ವೈದ್ಯಕೀಯ ಪರೀಕ್ಷೆ ಕೂಡ ನಡೆದಿದ್ದು, ಇಂದು ಯುವತಿ ವಾಸವಿದ್ದ ಆರ್​ಟಿ ನಗರದ ಪಿಜಿ, ರಮೇಶ್​ ಜಾರಕಿಹೊಳಿ ಯುವತಿಯನ್ನು ಕರೆಸಿಕೊಂಡಿದ್ದರು ಎನ್ನಲಾದ ಮಲ್ಲೇಶ್ವರಂನ ಅಪಾರ್ಟ್​ಮೆಂಟ್​ ಸ್ಥಳ ಮಹಜರು ನಡೆಯುತ್ತಿದೆ. ಮೂರು ದಿನದಿಂದ ಇಷ್ಟೆಲ್ಲ ಬೆಳವಣಿಗೆ ಆದರೂ ರಮೇಶ್​ ಮಾತ್ರ ಮಾ.29ರ ರಾತ್ರಿಯಿಂದ ಅಜ್ಞಾತ ಸ್ಥಳದಲ್ಲಿದ್ದಾರೆ. ಇದನ್ನೂ ಓದಿರಿ ಏರಿಯಾ ವಿದ್ಯುತ್ ತೆಗೆದು ರಾತ್ರೋರಾತ್ರಿ ಸಿಡಿ ಲೇಡಿ ಪೋಷಕರನ್ನು ಪೊಲೀಸರು ಸ್ಥಳಾಂತರಿಸಿದ್ದೇಕೆ?

ಯುವತಿ ಹೇಳಿಕೆ ಕೊಟ್ಟು ಎರಡು ದಿನ ಕಳೆದರೂ ರಮೇಶ್ ಮೌನವಾಗಿದ್ದಾರೆ. ಇತ್ತ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ. ರಮೇಶ್​ರ ಮುಂದಿನ ನಡೆಯೇನು? ಇವರು ನಿರೀಕ್ಷಣಾ ಜಾಮೀನು ತಗೋತಾರಾ? ಇಲ್ವಾ? ಇಂದಾದರೂ ಕಾಣಿಸಿಕೊಳ್ತಾರಾ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net