ಜಾರಕಿಹೊಳಿ ಸಿಡಿ ಕೇಸ್: ಆ ಐವರ ಬಗ್ಗೆ ದಿನೇಶ್​ ಕಲ್ಲಹಳ್ಳಿ ಹೇಳಿದ್ದೇನು?

dinesh kallahalli 1
Published on

ರಾಮನಗರ: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣ ಸಂಬಂಧ ನಿನ್ನೆ ಐವರು ಶಂಕಿತ ಆರೋಪಿಗಳನ್ನು ಎಸ್ಐಟಿ(ಸ್ಪೆಷಲ್​ ಇನ್ವೆಷ್ಟಿಗೇಶನ್​ ಟೀಂ) ವಶಕ್ಕೆ ಪಡೆದಿತ್ತು. ಈ ಐವರ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಹೇಳಿದ್ದೇನು ಗೊತ್ತಾ?

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಕೈಗೊಂಡ ಮೊದಲ ದಿನವೇ ಎಸ್​ಐಟಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಐವರು ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ ಆ ದಿನವೇ ಬಿಟ್ಟು ಕಳುಹಿಸಿದ್ದಾರೆ. ಎಸ್​ಐಟಿ ವಿಚಾರಣೆ ನಡೆಸಿದ ಆ ಐವರ ಪರಿಚಯ ತನಗಿಲ್ಲ ಎಂದು ದಿನೇಶ್ ಕಲ್ಲಹಳ್ಳಿ ಹೇಳುತ್ತಿದ್ದಾರೆ.

ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಯುವತಿಗೆ ಪ್ರಾಣ ಬೆದರಿಕೆ ಇದೆ ಎಂದು ಆಕೆಯ ಕುಟುಂಬ ಹೇಳಿದೆ ಎಂದು ಮಾ.2ರಂದು ದಿನೇಶ್​ ಕಲ್ಲಹಳ್ಳಿ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿದ್ದ ಜೋಶ್​ ದೂರುದಾರ ದಿನೇಶ್​ಗೀಗ ಇಲ್ಲವಾಗಿದೆ. ಎಸ್​ಐಟಿ ತನಿಖೆ ಬೆನ್ನಲ್ಲೇ ಮನೆಯ ರೂಂನಿಂದ ಹೊರಬರುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net