

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಧಿಕಾರ(ಬುಡ)ದ ಅಧ್ಯಕ್ಷರ ದಿಢೀರ್ ಬದಲಾವಣೆಯಾಗಿದ್ದು, ನೂತನ ಅಧ್ಯಕ್ಷರಾಗಿ ಸಚಿವ ಕೆ.ಎಸ್. ಈಶ್ಬರಪ್ಪ ಅವರ ಅಳಿಯ ಕೆ.ಎ.ರಾಮಲಿಂಗಪ್ಪ ನೇಮಕವಾಗಿದ್ದಾರೆ.
ಕೆ.ಎ.ರಾಮಲಿಂಗಪ್ಪ ಅವರನ್ನ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಎಸ್. ಶಿವಕುಮಾರಸ್ವಾಮಿ ಬುಧವಾರ ಆದೇಶ ಹೊರಡಿಸಿದ್ದಾರೆ. 8 ತಿಂಗಳ ಹಿಂದಷ್ಟೇ ಬುಡ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಆಯ್ಕೆಯಾಗಿದ್ದರು. ಇದೀಗ ಬಳ್ಳಾರಿ ಬಿಜೆಪಿ ಮುಖಂಡರಾದ ರಾಮಲಿಂಗಪ್ಪರನ್ನು ಈ ಸ್ಥಾನಕ್ಕೆ ನೇಮಕ ಮಾಡಿದ್ದು, ದಮ್ಮೂರು ಶೇಖರ್ಗೆ ಶಾಕ್ ಆಗಿದೆ. ದಮ್ಮೂರು ಶೇಖರ್ ಅವರು ರೆಡ್ಡಿ ಸಹೋದರರ ಆಪ್ತ. ಇದನ್ನೂ ಓದಿರಿ ಬೆಣ್ಣೆಹೊಳೆ ಫಾಲ್ಸ್ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ