

ಚಿತ್ರದುರ್ಗ: ಗೂಂಡಾಗಳಿರುವುದು ಬಿಜೆಯಲ್ಲೇ ಹೊರತು ನಮ್ಮಲ್ಲಿ ಅಲ್ಲವೆಂದು ಮಾಜಿ ಸಚಿವ ರಾಮಲಿಂಗರೆಡ್ಡಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೂಂಡಾಗಳಿರುವುದು ಬಿಜೆಪಿಯಲ್ಲಿಯೇ ಹೆಚ್ಚಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲಿ ಗೂಂಡಾಗಿರಿ ಮಾಡಿದ್ದಾರೆ ತೋರಿಸುವಂತೆ ಎಂದು ಬಿಜೆಪಿಯವರಿಗೆ ಸವಾಲು ರೆಡಿ ಸವಾಲೆಸೆದರು.
ಬಿಜಿಪಿಯವರು ಗೋಬೆಲ್ ವಂಶಸ್ಥರು, ಅವರಿಗೆ ಸುಳ್ಳು ಹೇಳದಿದ್ದರೆ ನಿದ್ರೆಯೇ ಬರುವುದಿಲ್ಲ, ಊಟ ಸೇರಲ್ಲವೆಂದು ವ್ಯಂಗವಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ತಪ್ಪಿನಿಂದಾಗಿ ಕೋವಿಡ್ ಸೋಂಕು ದೇಶಾದ್ಯಂತ ವ್ಯಾಪಿಸಿತು ಎಂದು ಆರೋಪಿಸಿದ ಅವರು, ಬಿಹಾರಕ್ಕೆ ಮಾತ್ರ ಯಾಕೆ ಕೋವಿಡ್ ವಿರುದ್ಧ ಲಸಿಕೆಯನ್ನು ಉಚಿತವಾಗಿ ಕೊಡಬೇಕೆಂದು ಪ್ರಶ್ನಿಸಿದರು. ಲಸಿಕೆ ವಿಚಾರದಲ್ಲಿ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಥರಸ್ ಪ್ರಕರಣದ ಬಗ್ಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅಪ್ಪಿತಪ್ಪಿಯೂ ಮಾತನಾಡಿಲ್ಲ. ಸಂಸದ ಅನಂತಕುಮಾರ್ ಹೆಗಡೆ, ಸಚಿವ ಸಿ.ಟಿ.ರವಿ ಹಾಗೂ ಶೋಭಾ ಕರಂದ್ಲಾಜೆ ಅವರ ಮಾತುಗಳಿಗೆ ಕಿಮ್ಮತ್ತಿಲ್ಲವೆಂದರು.