More

    ದುರ್ಗಾಷ್ಟಮಿಗೆ ಇದನ್ನ ಬಹಳ ಮಿಸ್​ ಮಾಡಿಕೊಳ್ತಿದ್ದಾರಂತೆ ಅನೂಷ್ಕಾ!

    ಮುಂಬೈ: ಕರೊನಾ ಭಯದ ನಡುವೆಯೂ ನವರಾತ್ರಿ ಹಬ್ಬ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಈ ಬಾರಿಯ ನವರಾತ್ರಿಯನ್ನು ದೇಶದೆಲ್ಲೆಡೆ ಸರಳವಾಗಿ ಆಚರಿಸಲಾಗುತ್ತಿದ್ದು, ಹಲವು ಸೆಲೆಬ್ರಿಟಿಗಳು ತಮ್ಮ ಮನೆಯ ನವರಾತ್ರಿ ಸಂಭ್ರಮವನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ‘ಕುರುನಾಡು’, ‘ಬಿಂಬ’ ಚಿತ್ರಗಳ ನಿರ್ದೇಶಕ ಜಿ.ಮೂರ್ತಿ ನಿಧನ

    ಬೇರೆಯವರೆಲ್ಲಾ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರೆ, ಬಾಲಿವುಡ್​ ನಟಿ ಅನೂಷ್ಕಾ ಶರ್ಮ ಮಾತ್ರ ತಾವು ಮಿಸ್​ ಮಾಡಿಕೊಳ್ಳುತ್ತಿರುವ ಒಂದು ವಿಷಯವನ್ನು ಎಲ್ಲರ ಜತೆಗೆ ಶೇರ್​ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಅನೂಷ್ಕಾ ಏನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಸಹಜವೇ. ಅದಕ್ಕೆ ಉತ್ತರ ಇಲ್ಲಿದೆ.

    ಇಂದು ದುರ್ಗಾಷ್ಟಮಿ. ಈ ದಿನದಂದು ಉತ್ತರ ಭಾರತದಲ್ಲಿ ಪೂರಿ, ಹಲ್ವಾ ಮುಂತಾದ ಖಾದ್ಯಗಳನ್ನು ಹಬ್ಬದ ಸಲುವಾಗಿ ಮಾಡಲಾಗುತ್ತದಂತೆ. ಆದರೆ, ಸದ್ಯದಲ್ಲೇ ತಾಯಿಯಾಗಲಿರುವ ಅನೂಷ್ಕಾಗೆ ಮಾತ್ರ ಕಾರಣಾಂತರಗಳಿಂದ ಹಬ್ಬದ ಅಡುಗೆಯನ್ನು ಸವಿಯಲಾಗುತ್ತಿಲ್ಲವಂತೆ.

    ಇದನ್ನೂ ಓದಿ: ಬಿಡುಗಡೆಯಾದ ಒಂದೇ ದಿನದಲ್ಲಿ ಪೈರಸಿಯಾದ ‘ಮಿರ್ಜಾಪುರ್​ – 2’

    ಹಾಗಾಗಿ ದುರ್ಗಾಷ್ಟಮಿಯ ಸಾಂಪ್ರದಾಯಿಕ ಅಡುಗೆಯ ಫೋಟೋವೊಂದನ್ನು ಶೇರ್​ ಮಾಡಿಕೊಂಡಿರುವ ಅವರು, ಮಿಸ್ಸಿಂಗ್​ ದಿಸ್​ ಟುಡೆ ಎಂಬ ಕ್ಯಾಪ್ಶನ್​ ಕೊಟ್ಟಿದ್ದಾರೆ.

    ಇಟಲಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಭಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts