

ಕಾರ್ಕಳ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ನಾಯಕ್ ರಕ್ಷಾ ರಾಮಚಂದ್ರ (597) ರಾಜ್ಯಕ್ಕೆ ತೃತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಕ್ಷಾ ಮೂಲ ಗಣಿತ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ 100 ಅಂಕ, ಇಂಗ್ಲಿಷ್ನಲ್ಲಿ 98 ಹಾಗೂ ಹಿಂದಿಯಲ್ಲಿ 99 ಅಂಕ ಪಡೆದಿದ್ದಾರೆ. ಅವರು ಬೈಲೂರು ನಿವಾಸಿ ರಾಮ್ಚಂದ್ರ ನಾಯಕ್ ಮತ್ತು ಅನುಪಮಾ ನಾಯಕ್ ದಂಪತಿಯ ಪುತ್ರಿ.
ವಿಜ್ಞಾನದಲ್ಲಿ ಆಸ್ತಿ ಎಸ್.ಶೆಟ್ಟಿ (596) ರಾಜ್ಯಕ್ಕೆ ನಾಲ್ಕನೇ ಹಾಗೂ ಜಿಲ್ಲೆಗೆ ಮೊದಲ ಸ್ಥಾನ ಪಡೆದರು. ಮರುಮೌಲ್ಯಮಾಪನದಲ್ಲಿ ಸಂಸ್ಥೆಯ 37 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಮೊದಲ ಹತ್ತು ರ್ಯಾಂಕ್ ಪಡೆದಿದ್ದಾರೆ. 70 ವಿದ್ಯಾರ್ಥಿಗಳು ಶೇ.98ಕ್ಕಿಂತ ಅಧಿಕ ಅಂಕ ಗಳಿಸಿದ್ದು, ಪರೀಕ್ಷೆ ಬರೆದ 783 ವಿದ್ಯಾರ್ಥಿಗಳಲ್ಲಿ 727 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ದಾಖಲೆಯಾಗಿದೆ.