ಮಕ್ಕಳಲ್ಲಿ ಮರಳು ಶಿಲ್ಪ ಉತ್ಸಾಹ: ಗೋಪಾಲ್ ಕೋಡಿ

camp
ರಜಾರಂಗು ಶಿಬಿರ ಸಮಾರಂಭದಲ್ಲಿ ಮತ್ಸೊೃೀದ್ಯಮಿ ಗೋಪಾಲ್ ಕೋಡಿ ಮಾತನಾಡಿದರು. ಮರಳು ಶಿಲ್ಪ ರಚನಕಾರ ರವಿ ಹಿರೇಬೆಟ್ಟು, ರಂಗ ನಿರ್ದೇಶಕ ನಾಗೇಶ ಕೆದೂರು, ಅಶೋಕ್ ಮೈಸೂರು, ನಾಗೇಶ ಕೆದೂರು, ಶ್ರೀಶ ತೆಕ್ಕಟ್ಟೆ ಉಪಸ್ಥಿತರಿದ್ದರು
Published on

ಕೋಟ: ಮರಳು ಶಿಲ್ಪ ವಿಭಿನ್ನ ಕಲೆ. ಸುಂದರ ಸಮುದ್ರ ಸನಿಹದಲ್ಲಿ ಅರಳುವ ಕಲೆ. ಎಷ್ಟೇ ಬಿಸಿಲಿದ್ದರೂ ಅರಿವಿಗೆ ಬಾರದಂತೆ ಕಲಾಲೋಕಕ್ಕೆ ಕೊಂಡೊಯ್ಯುವ ಕಲೆ. ಮರಳಿನಿಂದ ಕಲೆಯನ್ನು ಅರಳಿಸಿದ ಮಕ್ಕಳು ಹಿರಿಯರಿಗೂ ಉತ್ಸಾಹ ತುಂಬಿದ್ದಾರೆ ಎಂದು ಕಡಲ ವೀರ ತಂಡದ ಮತ್ಸೊೃೀದ್ಯಮಿ ಗೋಪಾಲ್ ಕೋಡಿ ಅಭಿಪ್ರಾಯಪಟ್ಟರು.

ಕುಂದಾಪುರ ಕೋಡಿಯ ಲೈಟ್‌ಹೌಸ್ ಬಳಿಯಶಸ್ವಿ ಕಲಾವೃಂದ ಕೊಮೆ-ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ 17ನೇ ದಿನದ ರಜಾರಂಗು-24 ಶಿಬಿರದಲ್ಲಿ ಮಾತನಾಡಿದರು.

ಮರಳುಶಿಲ್ಪ ರಚನಕಾರ ರವಿ ಹಿರೇಬೆಟ್ಟು, ರಂಗ ನಿರ್ದೇಶಕ ನಾಗೇಶ ಕೆದೂರು, ಅಶೋಕ್ ಮೈಸೂರು, ನಾಗೇಶ ಕೆದೂರು, ಶ್ರೀಶ ತೆಕ್ಕಟ್ಟೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net