ಅಕಾಲಿಕ ಮಳೆಗೆ ಬೆಂಗಳೂರಿನಲ್ಲಿ ಓರ್ವ ಬಲಿ

rain death
Published on

ಬೆಂಗಳೂರು: ಅಕಾಲಿಕ ಮಳೆಗೆ ಬುಧವಾರ ರಾತ್ರಿ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ತಿಲಕ್ ನಗರದ ಸಾಗರ್ ಅಪಲೊ ಆಸ್ಪತ್ರೆ ಬಳಿ ಮಳೆಗೆ ಮರ ಮತ್ತು ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಕತ್ತಲಲ್ಲಿ ಆ ತಂತಿಯನ್ನು ನೋಡದೆ ವೆಂಕಟೇಶ್ (41) ಎಂಬುವವರು ತುಳಿದ ಪರಿಣಾಮ ವಿದ್ಯುತ್​ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿರಿ ಭೀಕರ ಅಪಘಾತಕ್ಕೆ ಬೆಚ್ಚಿಬಿದ್ದ ಜನ: ಕಾರಿನಲ್ಲಿದ್ದ ಮೂವರು ಸಾವು

ಖಾಸಗಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿದ್ದ ವೆಂಕಟೇಶ್, ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದರು. ಬಿಬಿಎಂಪಿ ಮತ್ತು ಬೆಸ್ಕಾ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿಯಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net