

ಬೆಳ್ತಂಗಡಿ: ತಾಲೂಕಿನಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ತೆಂಕಕಾರಂದೂರು ಖಂಡಿಗ ಶ್ರೀಸಂತಾನ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರದ ಅವಧಿಯಲ್ಲಿ ರಚಿಸಲಾದ ಆವರಣದ ತಡೆಗೋಡೆ ಸಂಪೂರ್ಣ ಕುಸಿದಿದ್ದು ಇನ್ನಷ್ಟು ಕುಸಿಯುವ ಹಂತದಲ್ಲಿದೆ.
ಅತಿಶೀಘ್ರವಾಗಿ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಆಡಳಿತ ಮಂಡಳಿ ಹಾಗೂ ದೇವಸ್ಥಾನದ ಭಕ್ತರು ತಿಳಿಸಿದ್ದಾರೆ.