ಎರಡೇ ದಿನದಲ್ಲಿ ಮುರಿದ ಹೊಸ ಸ್ಲ್ಯಾಬ್ – ಹಳತರಷ್ಟೂ ಗಟ್ಟಿಯಾಗಿಲ್ಲ ಹೊಸತು – ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ

ಪುತ್ತೂರು: ಅಽಕಾರಿಗಳು ನಡೆಸುವ ಕಾಮಗಾರಿ ಸಮರ್ಪಕವಾಗಿಲ್ಲವಾ, ಕಾಮಗಾರಿಯಲ್ಲಿ ಬಳಸುವ ವಸ್ತುಗಳು ಗುಣಮಟ್ಟ ಕಳೆದುಕೊಂಡಿದೆಯಾ ಎಂದು ಪುತ್ತೂರು ಮುಖ್ಯ ರಸ್ತೆಯ ಚರಂಡಿಯೊಂದಕ್ಕೆ ಹೊಸದಾಗಿ ನಿರ್ಮಾಣ ಮಾಡಿ ಅಳವಡಿಸಿದ ಸ್ಲಾ ಬ್ ಪರಿಸ್ಥಿತಿಯನ್ನು ನೋಡಿದವರಿಗೆ ಅನುಮಾನ ಮೂಡುತ್ತಿದೆ.

ಪುತ್ತೂರು ಗಾಂಽಕಟ್ಟೆಯಿಂದ ಧರ್ಬೆ ಕಡೆಗೆ ಹೋಗುವ ಮುಖ್ಯ ರಸ್ತೆಯಿಂದ ಪಾಂಗಳಾಯಿ ಕಡೆಗೆ ಹೋಗುವ ರಸ್ತೆಯ ಮುಂಭಾಗದಲ್ಲಿ ಚರಂಡಿಗೆ ಅಳವಡಿಸಿದ ಸ್ಲಾಬ್ ಮುರಿದುಹೋಗಿದ್ದು, ಅಪಾಯ ಆಹ್ವಾನಿಸುವಂತಿತ್ತು. ಈ ಬಗ್ಗೆ ವಿಜಯವಾಣಿ ಜೂ.೧೩ಕ್ಕೆ ವರದಿ ಮಾಡಿ ಅಽಕಾರಿಗಳನ್ನು ಎಚ್ಚರಿಸಿತ್ತು.

ನಗರಸಭೆಯಿಂದ ಅದೇ ದಿನ ಹೊಸ ಸ್ಲ್ಯಾಬ್ ಸಿದ್ಧಪಡಿಸಿದ್ದು, ಸಮರ್ಪಕವಾಗಿ ಕ್ಯೂರಿಂಗ್ ನಡೆಸಿ ಎರಡು ದಿನಗಳ ಹಿಂದೆ ಚರಂಡಿಗೆ ಅಳವಡಿಸಲಾಗಿದೆ. ಬುಧವಾರ ಅದು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೊಸ ಸ್ಲ್ಯಾಬ್ ಅಕ್ಕಪಕ್ಕದಲ್ಲಿರುವ ಹಳೆ ಸ್ಲ್ಯಾಬ್‌ನಷ್ಟೂ ಗಟ್ಟಿಯಿಲ್ಲ ಎಂಬುದು ಈಗ ಸಾಬೀತಾಗಿದೆ.

ಸರ್ಕಾರಿ ಅಽಕಾರಿ ವರ್ಗ ಸ್ಥಳದಲ್ಲಿ ಹಾಜರಿದ್ದು ಕೆಲಸ ಮಾಡಿಸದೆ ಕೆಲಸದವರನ್ನು ಮಾತ್ರ ಬಿಟ್ಟು ಮಾಡಿಸುತ್ತಿರುವುದರಿಂದ ಜನರು ಸುರಕ್ಷಿತವಾಗಿ ನಡೆದುಕೊಂಡು ಹೋಗುವುದೂ ಕಷ್ಟ ಎನ್ನುವ ಸ್ಥಿತಿ ನಿರ್ಮಣವಾಗಿದೆ. ಎಲ್ಲ ಕಡೆಗಳಲ್ಲೂ ಕಳಪೆ ಕಾಮಗಾರಿಗಳೇ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಜನಸಾಮಾನ್ಯರದ್ದಾಗಿದೆ.


ವಾಹನ ಸಂಚರಿಸುವ ರಸ್ತೆಗಳ ಸ್ಲ್ಯಾಬ್‌ಗೆ ಡಬ್ಬಲ್ ಮ್ಯಾಟ್ ರಾಡ್ ಬಳಸುವ ಜತೆಗೆ ಎಂ ೨೫ ಕಾಂಕ್ರೀಟ್ ಬಳಸಬೇಂಬುದು ತಜ್ಞರ ಅಭಿಪ್ರಾಯ.ಆದರೆ ಇಲ್ಲಿ ಇದನ್ನು ಬಳಸಲಾಗಿದೆಯಾ ಎಂಬುದನ್ನು ನಗರಸಭೆ ಅಽಕಾರಿಗಳು ದೃಢಪಡಿಸಿಕೊಳ್ಳಬೇಕು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…