ಕಷ್ಟದ ದಾರಿಯಲ್ಲಿ ಮುನ್ನಡೆದು ಯಶಸ್ವಿಯಾದವರು – ಮುಗುಳಿ ತಿರುಮಲೇಶ್ವರ ಭಟ್ ಹೇಳಿಕೆ – ಎಲ್. ಎನ್. ಕೂಡೂರುಗೆ ಶ್ರದ್ಧಾಂಜಲಿ


ವಿಟ್ಲ: ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಜತೆಗೆ ನಾಯಕತ್ವವನ್ನು ಅಚ್ಚುಕಟ್ಟಾಗಿ ನಡೆಸಿ ತೋರಿಸಿದ ಎಲ್. ಎನ್. ಕೂಡೂರು ರಕ್ಷಣಾತ್ಮಕ ದಾರಿಯನ್ನು ಆಯ್ಕೆ ಮಾಡಿ ಕಷ್ಟವಾದರೂ ಮುನ್ನಡೆದು ಯಶಸ್ವಿಯಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಿಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಮರ್ಪಣೆಯ ಕಾರ್ಯ ಮಾಡಬೇಕಾಗಿದೆ ಎಂದು ವಿಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಹೇಳಿದರು.


ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರ ವಿಠಲ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಸಂಸ್ಥೆಯ ಸಂಚಾಲಕ ಎಲ್. ಎನ್. ಕೂಡೂರು ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪಾರ್ಚನೆ ನಡೆಸಿ ಮಾತನಾಡಿದರು.


ವಿಟ್ಲ ಅರಮನೆಯ ಬಂಗಾರು ಅರಸರು ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಸಂಘ ಸಂಸ್ಥೆಗಳಿಂದ ಆಗಮಿಸಿದ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ವಿಟ್ಲ ಅರಮನೆ, ವರ್ತಕರ ಸಂಘ, ವಿಟ್ಲ ಗ್ರಾಮೀಣ ಬ್ಯಾಂಕ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನ್ಸ್ ಸಿಟಿ, ಜೆಸಿಐ ವಿಟ್ಲ, ಜೇಸೀಸ್ ಎಜ್ಯುಕೇಷನ್ ಟ್ರಸ್ಟ್, ಬ್ರಹ್ಮಶ್ರೀ ವಿವಿಧೋದ್ದೇಶ ಸೌಹಾರ್ದ ಸಂಘ, ಹವ್ಯಕ ಮಂಡಲ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಽಕಾರಿಗಳು ನುಡಿನಮನ ಸಲ್ಲಿಸಿದರು.


ಪ್ರಮುಖರಾದ ರಾಧಾಕೃಷ್ಣ ನಾಯಕ್, ನಿತ್ಯಾನಂದ ನಾಯಕ್, ಅಲೋನ್ಸ್ ಸಿಲ್ವಸ್ಟರ್ ಮಸ್ಕರೇನ್ಹಸ್, ಸದಾಶಿವ ಬನ, ಬಾಬು ಕೊಪ್ಪಳ, ರವಿಪ್ರಕಾಶ್, ಆದರ್ಶ ಚೊಕ್ಕಾಡಿ, ಮೋಹನ ಅಜಕ್ಕಳ, ಪ್ರಶಾಂತ್ ಚೊಕ್ಕಾಡಿ, ಕಿರಣ್ ಕುಮಾರ್, ಶಂಕರನಾರಾಯಣ ಪ್ರಸಾದ್, ಚಂದ್ರಕಲಾ, ಜಲಜಾಕ್ಷಿ, ಜಗನ್ನಾಥ ಸಾಲ್ಯಾನ್, ಮುರಳಿಕೃಷ್ಣ, ಅನಂತ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಕೃಪಾ ಆಶಯಗೀತೆ ಹಾಡಿದರು. ಉಪನ್ಯಾಸಕ ಶ್ರೀಹರಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…