ಜೂನ್ 1ರವರೆಗೂ ಬಿರುಸಿನ ಮಳೆ ಸಾಧ್ಯತೆ: ಹಲವು ಕುಟುಂಬಗಳ ಸ್ಥಳಾಂತರ: ಹಲವೆಡೆ ಹಾನಿ

New Project (12)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದು, ಮೇ 31ರಿಂದ ಜೂನ್ 1ರವರೆಗೆ ಕೇರಳದಲ್ಲಿ ಗುಡುಗು ಸಹಿತ ಬಿರುಸಿನ ಮಳೆ ಮತ್ತು ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ನೆರೆಪೀಡಿತ ಪ್ರದೇಶದಲ್ಲಿರುವ ಹಲವಾರು ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಹೊಸದುರ್ಗದಲ್ಲಿ 12 ಹಾಗೂ ಕಾಸರಗೋಡಿನ 28 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಹಾನಿಗೀಡಾಗಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ನೆರೆಪೀಡಿತ ಪ್ರದೇಶಗಳಲ್ಲಿ ವಿಪತ್ತು ನಿವಾರಣಾ ತಂಡ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

ಚೆರ್ಕಳ ಮೇಲ್ಸೇತುವೆಯಿಂದ ತೊಡಗಿ ತೆಕ್ಕಿಲ್, ಮೇಲ್ಪರಂಬ ಪೊಲೀಸ್ ಠಾಣೆ ಸುತ್ತಮುತ್ತಲಿನ ಪ್ರದೇಶ, ಕಾಸರಗೋಡು- ಕಾಞಂಗಾಡ್ ರಾಜ್ಯ ಹೆದ್ದಾರಿಯ ಪಿಲಿಕುಂಜೆಯ ಭೂಕುಸಿತ ಪ್ರದೇಶ, ಮಧೂರಿನ ನೆರೆಪೀಡಿತ ಪ್ರದೇಶ, ಬಂದ್ಯೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಪ್ರದೇಶ, ಉಪ್ಪಳ ಗೇಟ್ ಮತ್ತು ಹೊಸಂಗಡಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಶುಕ್ರವಾರ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net