

ಮನೋಹರ್ ಬಳಂಜ ಬೆಳ್ತಂಗಡಿ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಪರಿಸರದಲ್ಲಿ ಹಲವು ಮರಗಳು ರಸ್ತೆಗೆ ಉರುಳುವ ಭೀತಿ ಎದುರಾಗಿದ್ದು ಅಪಾಯದ ಸ್ಥಿತಿ ಉಂಟಾಗಿದೆ. ನಿಡಿಗಲ್‌ನಿಂದ ಸೋಮಂತಡ್ಕದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ 25ಕ್ಕಿಂತ ಅಧಿಕ ಅಪಾಯಕಾರಿ ಮರಗಳಿಗವೆ. ಈ ಪ್ರದೇಶದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ರಸ್ತೆ ವಿಸ್ತರಣೆಗಾಗಿ ಎರಡು ಬದಿಗಳಲ್ಲಿ ಮರಗಳ ಬುಡದ ಭಾಗದವರೆಗೂ ಅಗೆದು ಹಾಕಲಾಗಿದೆ. ಈಗಾಗಲೇ ಹಲವು ಮರಗಳು ತೆರವುಗೊಂಡು ಇಲ್ಲಿ ರಸ್ತೆ ವಿಸ್ತರಣೆಗೊಳಿಸಲಾಗಿದೆ. ರಸ್ತೆ ವಿಸ್ತರಣೆಗೆ ಇಲ್ಲಿರುವ ಮರಗಳ ಬೇರಿನ ಭಾಗದವರೆಗೂ ಮಣ್ಣು ತೆರವುಗೊಳಿಸಲಾಗಿದ್ದು, ಮರದ ಬುಡ ಭಾಗದ ಮಣ್ಣು ಸಡಿಲಗೊಂಡು ರಸ್ತೆಯತ್ತ ವಾಲಿ ನಿಂತಿವೆ. ರಸ್ತೆ ಅಭಿವೃದ್ಧಿ ಕಾಮಗಾರಿ, ಮರಗಳ ತೆರವು, ಮಣ್ಣು ಅಗೆಯಲು ಯಂತ್ರೋಪಕರಣಗಳನ್ನು ಬಳಸಲಾಗಿದ್ದು, ಇದು ಕೂಡ ಮರಗಳ ಭವಿಷ್ಯಕ್ಕೆ ಮಾರಕವಾಗಿದೆ. ಪ್ರಸ್ತುತ ಸುರಿಯುತ್ತಿರುವ ಮಳೆಗೆ ಅರಣ್ಯ ಭಾಗದ ನೀರು ಈ ಮರಗಳ ವ್ಯಾಪ್ತಿಯಲ್ಲಿ ಹರಿಯುತ್ತಿದ್ದು ಇನ್ನಷ್ಟು ಮಣ್ಣು ಸವಕಳಿಗೊಳ್ಳುತ್ತಿದೆ. ಸರಿಯಾದ ಚರಂಡಿಗಳು ನಿರ್ಮಾಣವಾಗದೆ ಮರಗಳ ಬುಡ ಭಾಗದ ಅಲ್ಲಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ. ಈ ಅಪಾಯಕಾರಿ ಮರಗಳನ್ನು ತೆರೆವುಗೊಳಿಸದಿದ್ದರೆ ಈ ಮಳೆಗಾಲದಲ್ಲಿ ರಸ್ತೆಗೆ ಉರುಳಿ ಬೀಳುವ ಸಾಧ್ಯತೆ ಹೆಚ್ಚಿದೆ. ತಾಸುಗಟ್ಟಲೆ ಸಂಚಾರ ವ್ಯತ್ಯಯ ಈಗಾಗಲೇ ದಿನದಿಂದ ದಿನಕ್ಕೆ ಮರಗಳು ರಸ್ತೆಯತ್ತ ವಾಲತೊಡಗಿವೆ. ಮರಗಳ ವ್ಯಾಪ್ತಿಯಲ್ಲಿ ಎಚ್‌ಟಿ ಸಂಪರ್ಕದ ವಿದ್ಯುತ್ ಲೈನ್ ಕೂಡ ಹಾದು ಹೋಗಿದೆ. ಮರಗಳು ಚಲಿಸುವ ವಾಹನಗಳ ಮೇಲೆ, ಪಾದಚಾರಿಗಳ ಮೇಲೆ ಬಿದ್ದರೆ ಪ್ರಾಣಹಾನಿಯೂ ಸಂಭವಿಸಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ವ್ಯತ್ಯಯ ಉಂಟಾಗುತ್ತದೆ. ಈಗಾಗಲೇ ಒಂದು ಮರ ಉರುಳಿ ಬಿದ್ದಿದೆ. ಇದು ರಸ್ತೆಯ ವಿರುದ್ಧ ದಿಕ್ಕಿಗೆ ಉರುಳಿದ ಕಾರಣ ಯಾವುದೇ ಸಮಸ್ಯೆಯಾಗಿಲ್ಲ.
ಸೀಟು ಪ್ರದೇಶದಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ ಪರಿಶೀಲನೆ ನಡೆಸಿದ್ದು ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕಿದ ಕೂಡಲೇ ಅಪಾಯಕಾರಿ ಮರಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ತ್ಯಾಗರಾಜ್ ಆರ್‌ಎಫ್‌ಒ ಅರಣ್ಯ ಇಲಾಖೆ ಬೆಳ್ತಂಗಡಿ ನಿಡಿಗಲ್, ಸೋಮಂತಡ್ಕ, ಮುಂಡಾಜೆ, ಚಿಬಿದ್ರೆ ಮೊದಲಾದ ಪ್ರದೇಶದಲ್ಲಿ ನೂರಾರು ಅಪಾಯಕಾರಿ ಮರಗಳಿವೆ. ಮಳೆ- ಗಾಳಿ ಸಂದರ್ಭ ಇಲ್ಲಿನ ರಸ್ತೆಗಳಲ್ಲಿ ವಾಹನಗಳು ಭಯದ ಸನ್ನಿವೇಶದಲ್ಲಿ ಸಂಚರಿಸಬೇಕಾಗಿದೆ. ಶ್ರೀಧರ, ವಾಹನ ಸವಾರ https://www.vijayavani.net/dakshina-kannada-landslide-three-death-two-fishermen-missing https://www.vijayavani.net/dharmasthala-mela