ಭಕ್ತರ ಹಸಿವು ನೀಗಿಸುವ ಕಾರ್ಯ ಶ್ರೇಷ್ಠ: ಶ್ರೀ ವಿದ್ಯಾಪ್ರಸನ್ನ ಶ್ರೀ ಆಶೀರ್ವಚನ

New Project (4)
Published on

ವಿಜಯವಾಣಿ ಸುದ್ದಿಜಾಲ ಕುಕ್ಕೆಸುಬ್ರಹ್ಮಣ್ಯ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹಸಿವೆಯಿಂದ ಹಿಂದಿರುಗಬಾರದು ಎಂಬುದು ಸಂಕಲ್ಪವಾಗಿದ್ದು, ಕ್ಷೇತ್ರದಿಂದ ಬೆಳಗ್ಗಿನ ಉಪಾಹಾರ ಸಹಿತ ಮೂರು ಹೊತ್ತು ಭೋಜನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಆಡಳಿತ ಮಂಡಳಿಗೆ ಇದರ ಶ್ರೇಯಸ್ಸು ಸಲ್ಲಬೇಕು ಎಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀ ಹೇಳಿದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಆರಂಭಿಸಲಾದ ಉಪಾಹಾರ ಪ್ರಸಾದ ವ್ಯವಸ್ಥೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಪುರೋಹಿತ ಸುಬ್ರಹ್ಮಣ್ಯ ಕೋರ್ನಾಯ ಉಪಾಹಾರ ವ್ಯವಸ್ಥೆಗೆ ಪೂಜೆ ನೆರವೇರಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕಿ ಭಾಗೀರಥಿ ಮುರುಳ್ಯ, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಗ್ರಾಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ, ನಾಗಭೂಷಣ್ ಗುರೂಜಿ, ಭರತ್ ಮುಂಡೋಡಿ, ಸುಧೀರ್‌ಕುಮಾರ್ ಶೆಟ್ಟಿ, ಸದಾನಂದ ಮಾವಜಿ, ಡಾ.ಕೆ.ವಿ ರೇಣುಕಾ ಪ್ರಸಾದ್, ಡಾ.ರು, ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಅಜಿತ್ ಕುಮಾರ್, ಸತೀಶ್ ಕೂಜುಗೋಡು, ಅಚ್ಚುತ ಆಲ್ಕಬೆ, ಲೋಲಾಕ್ಷ ಕೈಕಂಬ, ಪವನ್.ಎಂ.ಡಿ, ಜಿ.ಕೃಷ್ಣಪ್ಪ, ಪಿ.ಸಿ.ಜಯರಾಮ್, ಅಭಿಲಾಷ್ ಪಿ.ಕೆ, ಡಾ.ಜ್ಯೋತಿ ಆರ್.ಪ್ರಸಾದ್, ಪ್ರಾಂಶುಪಾಲರಾದ ಸೋಮಶೇಖರ ನಾಯಕ್, ಡಾ.ದಿನೇಶ್ ಪಿ.ಟಿ ಹಲವರು ಉಪಸ್ಥಿತರಿದ್ದರು.

ದೇವರ ದರ್ಶನಕ್ಕೆಂದು ಬರುವ ಭಕ್ತನ ಹಸಿವು ನೀಗಿಸುವ ನಿಟ್ಟಿನಲ್ಲಿ ಕ್ಷೇತ್ರದಿಂದ ಉತ್ತಮ ವ್ಯವಸ್ಥೆ ಆರಂಭಿಸಲಾಗಿದೆ. ಮಧ್ಯಾಹ್ನ ಅಥವಾ ರಾತ್ರಿ ಭೋಜನ ಪ್ರಸಾದ ಸ್ವೀಕರಿಸಲು ಅಸಾಧ್ಯವಾಗುವವರು ಬೆಳಗ್ಗೆ ಅವಧಿಯಲ್ಲೂ ದೇವರ ಉಪಾಹಾರ ಪ್ರಸಾದ ಸ್ವೀಕರಿಸಿ ಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾಗಬಹುದು. ಹಸಿದವರಿಗೆ ಆಹಾರ ನೀಡುವುದು ದೇವರು ಮೆಚ್ಚುವ ಕೆಲಸ. ವಿದ್ಯಾಪ್ರಸನ್ನ ಶ್ರೀ, ಸುಬ್ರಹ್ಮಣ್ಯ ಮಠಾಧೀಶ https://www.vijayavani.net/blood-camp-17 https://www.vijayavani.net/hrudakalasha-in-madhur-temple

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net