

ಮೂಡುಬಿದಿರೆ: ಮಳೆ ಗಾಳಿಗೆ ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಶಿವಾಲಯ ಎಂಬಲ್ಲಿ ಶೇಖರ ಯಾನೆ ಬೂದ ಎಂಬುವರ ಮನೆಯ ಛಾವಣಿ ಬುಧವಾರ ಮುಂಜಾನೆ ಸಂಪೂರ್ಣವಾಗಿ ಕುಸಿದು ಬಿದ್ದು, ನಷ್ಟ ಉಂಟಾಗಿದೆ.
ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಮಲಗಿರುವಾಗ ಘಟನೆ ಸಂಭವಿಸಿದೆ. ಹೆಂಚು ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಂಚಾಯಿತಿ ಅಧ್ಯಕ್ಷ ವಾಸುದೇವ ಉಪಾಧ್ಯಾಯ, ಪಿಡಿಒ ಸಾಯೀಶ ಚೌಟ, ಸದಸ್ಯರಾದ ಮಹಮ್ಮದ್ ಅಸ್ಲಾಂ, ರಜನಿ, ಟೆಸ್ಲೀನಾ ಮತ್ತು ಗ್ರಾಮಕರಣಿಕೆ ಉಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.