ಕನ್ನಡ ಭವನದ ಕನ್ನಡಪರ ಚಟುವಟಿಕೆ ಶ್ಲಾಘನೀಯ : ಪ್ರದೀಪ್‌ಕುಮಾರ್ ಕಲ್ಕೂರ ಮೆಚ್ಚುಗೆ

New Project (6)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕನ್ನಡ ಭವನದ ಕನ್ನಡಪರ ಚಟುವಟಿಕೆಗಳು ಅನುಕರಣೀಯ ಹಾಗೂ ಶ್ಲಾನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ತಿಳಿಸಿದ್ದಾರೆ.

ಮಂಗಳೂರು ತಾಲೂಕು ಮಹಿಳಾ ಒಕ್ಕೂಟ ಸಭಾಭವನದಲ್ಲಿ ಡಾ.ವಾಮನ್ ರಾವ್ ಸಾರಥ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೆ ರೇಖಾ ಸುದೇಶ್ ರಾವ್ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದ.ಕ ಜಿಲ್ಲಾ ಗೌರವಾಧ್ಯಕ್ಷ ಡಾ.ರವೀಂದ್ರ ಜೆಪ್ಪು ಚಾಲನೆ ನೀಡಿದರು. ಡಾ.ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಡಾ.ಉದಯ ಕುಮಾರ್, ವಿಧಾನಸಭಾ ಮಾಜಿ ಸಚೇತಕರಾದ ಕ್ಯಾ.ಗಣೇಶ್ ಕಾರ್ಣಿಕ್, ದ.ಕ.ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೊಳಚಪ್ಪೆ ಗೋವಿಂದ ಭಟ್, ಓಜಸ್ ಸಂಸ್ಥೆ ಅಧ್ಯಕ್ಷ ಮಂಗಳಾ ಎನ್.ಕೆ., ಕರ್ನಾಟಕ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ರಾಷ್ಟ್ರೀಯ ಸಾಂಸ್ಕೃತಿಕ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಗಂಗಾಧರ್ ಗಾಂಧಿ, ಡಾ.ಮಾಲತಿ ಶೆಟ್ಟಿ ಮಾನೂರ್, ಪ್ರಕಾಶ್ ಚಂದ್ರ ಉಳ್ಳಾಲ, ಶೋಭಾ ಲೋಕೇಶ್, ಚಂದ್ರಕಾಂತ್ ಉಪಸ್ಥಿತರಿದ್ದರು.

ಏಷಿಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ‘ನ್ಯೂ ಏಷಿಯನ್ ಚಾಂಪಿಯನ್‌ಷಿಪ್ ಪಡೆದ ನಾಗಶ್ರೀ ಗಣೇಶ್ ಉಪ್ಪಿನಕುದ್ರು ಅವರಿಗೆ ವಿಶೇಷ ಸನ್ಮಾನದೊಂದಿಗೆ ದಿ ಲೈಟ್ ಒಫ್ ಹೋಪ್ಸ್ ಅಚೀವ್ಮೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು. ಪ್ರದೀಪ್ ಬೇಕಲ್ ಸ್ವಾಗತಿಸಿದರು. ವೈಶಾಕ್ ಕುಮಾರ್ ನಿರೂಪಿಸಿದರು. ಉಮೇಶ್ ರಾವ್ ಕುಂಬ್ಳೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರ ನೃತ್ಯ, ಗಾನ ವೈಭವ ನಡೆಯಿತು.

ಸಾಧಕರಿಗೆ ಪುರಸ್ಕಾರ

ಸಾಧಕರಾದ ಕೃತಿ ಬೇಕಲ್, ಜ್ಞಾನೇಶ್ ಬೇಕಲ್, ಐಶ್ವರ್ಯ ಆರ್., ಇಂಚರಾ, ಕೃತಿ, ಮನೀಶ್ ರಾವ್ ಆರ್.ಬಿ.ಹವೀಶ್ ಆರ್., ಗಣೇಶ್ ರಾಜ್ ಕೆ.ಎಂ., ಡ್ಯಾಫ್ನ ಕೆ.ವಿ., ಧ್ಯಾನ್ ಮದ್ದೋಡಿ, ದೀಕ್ಷಿತಾ ವಿ., ಭುವಿ, ನಿತ್ಯ, ಶಿವಾನಿ ದಿನೇಶ್ ರಾವ್, ಮಾನ್ಯಾ, ಸಾಗರಿ ಎಸ್., ನಿನಾದ, ದೀಕ್ಷಾ, ಡಿ.ರಾವ್, ಸುಪ್ರೀತಾ ರಾವ್ ಬಿ., ಸಾತ್ವಿಕ್ ಕೆ. ಸಾನ್ವಿ ಗುರುಪುರ, ಸಾಕ್ಷಿ, ಸಾದ್ವಿನಿ, ವೈಷ್ಣವಿ ವಿ.ಬೇಕಲ್, ವೈಶಾಕ್ ಕುಮಾರ್, ತನುಷ್ ಕೆ., ಸ್ವಸ್ತಿಕ್ ಆರ್., ಯಕ್ಷತ್ ಶೆಟ್ಟಿ, ಚಿರಸ್ವಿ ಕೆ.ಜಿ., ಶ್ರೇಯಕೃಷ್ಣ ಅವರಿಗೆ ಕನ್ನಡ ಭವನದ ಯುವ ಪ್ರತಿಭಾ ಪ್ರಶಸ್ತಿಯಾದ ‘ಭರವಸೆಯ ಬೆಳಕು’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ

ಹಿರಿಯ ಸಾಹಿತಿ ಡಾ.ಶಿವಾನಂದ ಬೇಕಲ್ ಹಾಗೂ ಕ್ಯಾ.ಗಣೇಶ್ ಕಾರ್ಣಿಕ್ ಅವರಿಗೆ ‘ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2025’ ನೀಡಿ ಗೌರವಿಸಲಾಯಿತು. ನಾಡೋಜ ಡಾ.ಕೃಷ್ಣಪ್ರಸಾದ್ ನೇತ್ರಾಲಯ, ಜೆ.ಕೆ.ರಾವ್ ಮಂಗಳೂರು, ಯೋಗೀಶ್ ಕುಮಾರ್ ಜೆಪ್ಪು, ಡಾ.ಉದಯ ಕುಮಾರ್, ಡಾ.ಮಂಜುಳಾ ಅನಿಲ್ ರಾವ್, ಡಾ.ಕೆ.ವಿ.ದೇವಪ್ಪ ಅವರಿಗೆ ಕನ್ನಡ ಭವನದ ಪ್ರತಿಷ್ಠಿತ ‘ಸಮಾಜ ಸೇವಾ ರತ್ನ ಪ್ರಶಸ್ತಿ-2025’ ನೀಡಲಾಯಿತು. ರತ್ನಾ, ಜೋಗಟ್ಟೆ, ಶಾರದಾ ಮೊಳೆಯಾರ್, ಜೋಸ್ನಾ ನುಳ್ಳಿಪ್ಪಾಡಿ, ಮಂಗಳೂರು, ಜನಾರ್ದನ್ ಎಚ್.ಎಸ್., ಮಂಜುನಾಥ್ ಕೆ.ಬೈಲೂರ್, ರಾಜನ್ ಮುನಿಯೂರ್, ಪ್ರವೀಣ್ ಕುಲಕರ್ಣಿ ಬಿದಿಗೆಚಂದ್ರ, ಶರಣ್ ಬೇಕಲ್ ಅವರಿಗೆ ಕನ್ನಡ ಭವನದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net