ಪುತ್ತೂರು: ಬಂಟ್ವಾಳದಲ್ಲಿ ನಡೆದ ಕೊಲೆಯನ್ನು ನೋಡಿದರೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದ್ದು, ಪೊಲೀಸ್ ಇಲಾಖೆಯ ವೈಫಲ್ಯ ಎದ್ದುಕಾಣುತ್ತಿದೆ ಎಂದು ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಹೇಳಿದರು.
ಇತ್ತೀಚೆಗೆ ಕೊಲೆಯಾದ ರೌಡಿಶೀಟರ್ ಸಂತಾಪ ಸಭೆಗಳಲ್ಲಿ ಪ್ರತೀಕಾರದ ಮಾತನ್ನು ಹಿಂದುತ್ವವಾದಿಗಳು ಹೇಳುತ್ತಿದ್ದರು. ಇಲಾಖೆ ಇಂತವರ ಮೇಲೆ ಅಗತ್ಯ ಕಾನೂನು ಕ್ರಮಕೈಗೊಳ್ಳುವ ಅಥವಾ ಬಂಧನ ಮಾಡುವ ಕೆಲಸ ಮಾಡಿಲ್ಲ. ಅನುಮತಿಯಿಲ್ಲದೆ ಬಜ್ಪೆಯಲ್ಲಿ ಕಾರ್ಯಕ್ರಮ ನಡೆಸಿ ಯುವಕರನ್ನು ಕೆರಳಿಸುವ ಕಾರ್ಯ ಮಾಡಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆ, ಸರ್ಕಾರ ಇದೆಯ ಇಲ್ಲವಾ ಎಂಬ ಅನುಮಾನ ಮೂಡಿಸುವಂತೆ ಮಾಡಿದೆ. ಅತಿಥಿ ಉಸ್ತುವಾರಿ ಸಚಿವರಿಗೆ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎಂಬ ಮಾಹಿತಿಯಿಲ್ಲದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಪದಾಧಿಕಾರಿಗಳಾದ ಬಶೀರ್ ಪರ್ಲಡ್ಕ, ಮೋನು ಬಪ್ಪಳಿಗೆ ಉಪಸ್ಥಿತರಿದ್ದರು.