ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಹಾನಿ

New Project (6)
Published on

ಬಂಟ್ವಾಳ:ತಾಲೂಕು ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿ-ಮಳೆಗೆ ಕೆಲವೆಡೆ ಹಾನಿ ಉಂಟಾಗಿ ನಷ್ಟ ಸಂಭವಿಸಿದೆ. ಬಂಟ್ವಾಳ ಕಸ್ಬಾ ಗ್ರಾಮದ ಅರ್ಬಿ ಗುಡ್ಡೆ ಎಂಬಲ್ಲಿ ಚಿಕ್ಕ ಎಂಬುವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿ ಉಂಟಾಗಿದೆ.

ಪಿಲಿಮೊಗರು ಗ್ರಾಮದ ಪ್ರಭಾಕ್ಷಿ ಎಂಬುವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಗಾಳಿಯಿಂದ ಹಾನಿ ಉಂಟಾಗಿದೆ. ಇದೇ ಗ್ರಾಮದ ದಪ್ಪರಬೈಲು ಎಂಬಲ್ಲಿ ವೆಂಕಪ್ಪ ಶೆಟ್ಟಿ ಎಂಬುವರ ಅಡಕೆ ತೋಟದಲ್ಲಿ ಮರಗಳು ಉರುಳಿ ಬಿದ್ದಿವೆ. ಸುಣ್ಣದ ಪೋಳಿ ಎಂಬಲ್ಲಿ ಸುಂದರ ಎಂಬುವರ ಮನೆಗೆ ಹಾನಿಯಾಗಿದೆ. ಚೆನ್ನೈತ್ತೋಡಿ ಗ್ರಾಮದ ಕರಿಮಲೆ ಎಂಬಲ್ಲಿ ಶಿವರಾಯ್ ನಾಯ್ಕ ಅವರ ಅಡಕೆ ತೋಟ ಹಾಗೂ ಬಾಳೆ ಕೃಷಿಗೆ ಹಾನಿಯಾಗಿದೆ. ಮೂಡು ಪಡುಕೋಡಿ ಗ್ರಾಮದ ರುಕ್ಮಯ ಗೌಡ ಅವರ ಮನೆಗೆ ಭಾಗಶಃ ಹಾನಿ ಉಟಾಗಿದೆ.

ಪಿಲಿಮೊಗರು ಗ್ರಾಮದ ದಪ್ಪರಬೈಲು ಎಂಬಲ್ಲಿ ವೆಂಕಪ್ಪ ಶೆಟ್ಟಿ ಎಂಬುವರ ಅಡಕೆ ತೋಟದಲ್ಲಿ ಮರಗಳು ಉರುಳಿ ಬಿದ್ದಿವೆ.
ಪಿಲಿಮೊಗರು ಗ್ರಾಮದ ದಪ್ಪರಬೈಲು ಎಂಬಲ್ಲಿ ವೆಂಕಪ್ಪ ಶೆಟ್ಟಿ ಎಂಬುವರ ಅಡಕೆ ತೋಟದಲ್ಲಿ ಮರಗಳು ಉರುಳಿ ಬಿದ್ದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net